ADVERTISEMENT

ಕಾರಟಗಿ: ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 4:19 IST
Last Updated 25 ಸೆಪ್ಟೆಂಬರ್ 2025, 4:19 IST
ಕಾರಟಗಿಯಲ್ಲಿ ಪಂಚಮಸಾಲಿ ಸಮಾಜದಿಂದ ಕೂಡಲಸಂಗಮ ಪಂಚಮಸಾಲಿ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿಯ ಉಚ್ಛಾಟನೆ ಕ್ರಮ ವಿರೋಧಿಸಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಯಿತು. ಕನಕದಾಸ ವೃತ್ತದಲ್ಲಿ ನಡೆದ ಸಭೆಯಲ್ಲಿ ಮುಖಂಡ ಚನ್ನಬಸಪ್ಪ ಸುಂಕದ ಮಾತನಾಡಿದರು
ಕಾರಟಗಿಯಲ್ಲಿ ಪಂಚಮಸಾಲಿ ಸಮಾಜದಿಂದ ಕೂಡಲಸಂಗಮ ಪಂಚಮಸಾಲಿ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿಯ ಉಚ್ಛಾಟನೆ ಕ್ರಮ ವಿರೋಧಿಸಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಯಿತು. ಕನಕದಾಸ ವೃತ್ತದಲ್ಲಿ ನಡೆದ ಸಭೆಯಲ್ಲಿ ಮುಖಂಡ ಚನ್ನಬಸಪ್ಪ ಸುಂಕದ ಮಾತನಾಡಿದರು   

ಕಾರಟಗಿ: ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರನ್ನು ಪೀಠದಿಂದ ಉಚ್ಚಾಟಿಸಿರುವ ಕ್ರಮ ಖಂಡಿಸಿ, ತಾಲ್ಲೂಕಿನ ಪಂಚಮಸಾಲಿ ಸಮಾಜದವರು ಪಟ್ಟಣದಲ್ಲಿ ಬುಧವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು.

ವಿಶೇಷ ಎಪಿಎಂಸಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಹಳೆಯ ಬಸ್‍ನಿಲ್ದಾಣ, ರಾಜ್ಯ ಹೆದ್ದಾರಿ ಮೂಲಕ ಸಾಗಿ ಕನಕದಾಸ ವೃತ್ತದಲ್ಲಿ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು.

ಪಂಚಮಸಾಲಿ ದಾಸೋಹ ಸಮಿತಿ ರಾಜ್ಯಾಧ್ಯಕ್ಷ ಚನ್ನಬಸಪ್ಪ ಸುಂಕದ ಮಾತನಾಡಿ, ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಶ್ರೀಗಳು ನಿರಂತರವಾಗಿ ಹೋರಾಟವನ್ನು ಮಾಡುತ್ತಿದ್ದು, ಇಡೀ ಸಮಾಜವೇ ಅವರ ಬೆನ್ನಿಗಿದೆ. ಶಾಸಕ ವಿಜಯಾನಂದ ಕಾಶಪ್ಪನವರ ಶ್ರೀಗಳನ್ನು ಬಳಸಿಕೊಂಡು, ಶಾಸಕರಾಗುತ್ತಿದ್ದಂತೆಯೇ ಹೋರಾಟ ಮಾಡದಂತೆ ಶ್ರೀಗಳಿಗೆ ತಾಕೀತು ಮಾಡಿದರು. ತಮ್ಮ ಆಸೆ ಈಡೇರದೇ, ಹತಾಶರಾಗಿ ಇದೀಗ ಶ್ರೀಗಳ ತೇಜೋವಧೆಗೆ ಮುಂದಾಗಿ ಹಗೆ ಸಾಧಿಸಲು ಉಚ್ಚಾಟನೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಜಿ.ಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಸಮಾಜದ ತಾಲ್ಲೂಕಾಧ್ಯಕ್ಷ ಪಾಲಾಕ್ಷಪ್ಪ ಕೆಂಡದ ಮುಖಂಡ ಕೆ. ಪರಮೇಶಗೌಡ ಪೊಲೀಸ್‌ ಪಟೇಲ್, ಸಿದ್ಧನಗೌಡ ಕತ್ತಿ ಮಾತನಾಡಿ, ‘ಸಮಾಜದಿಂದ ಕಾಶಪ್ಪನವರ ಅವರನ್ನು ಉಚ್ಚಾಟಿಸಲೂ ಸಮಾಜ ಹಿಂದೇಟು ಹಾಕುವುದಿಲ್ಲ’ ಎಂದರು.

ಪಂಚಸೇನೆ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶಿವಶರಣಪ್ಪ ಶಿವಪೂಜಿ, ನಗರ ಘಟಕ ಅಧ್ಯಕ್ಷ ಬಸವರಾಜ್‌ ಎತ್ತಿನಮನಿ, ಪ್ರಧಾನ ಕಾರ್ಯದರ್ಶಿ ಶರಣಪ್ಪ ಅಂಗಡಿ, ಪ್ರಮುಖರಾದ ಗುಂಡಪ್ಪ ಕುಳಗಿ, ನಿವೃತ್ತ ವಿಜ್ಞಾನಿ ಎಚ್. ಬಸಪ್ಪ, ಶರಣೇಗೌಡ ಮಾಲಿಪಾಟೀಲ್, ವಿರೂಪಾಕ್ಷಪ್ಪ ಕಟಾಂಬ್ಲಿ ಸೇರಿ ನೂರಾರು ಸಮಾಜದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.