ಗಂಗಾವತಿ (ಕೊಪ್ಪಳ ಜಿಲ್ಲೆ): ಕುಡಿದ ಮತ್ತಿನಲ್ಲಿ ವಾಂತಿ ಮಾಡಲು ತೆರಳಿದ ಯುವಕನೊಬ್ಬ ತಾಲ್ಲೂಕಿನ ಸಾಣಾಪುರ ಗ್ರಾಮದ ಕೆರೆ ಸಮೀಪದ ಗಂಗಮ್ಮಗುಡಿ ಬಳಿ (ಜಂಗ್ಲಿ ಕ್ರಾಸ್) ತುಂಗಾಭದ್ರ ಎಡದಂಡೆ ಕಾಲುವೆಗೆ ಕಾಲುಜಾರಿ ಗುರುವಾರ ಬಿದ್ದಿದ್ದಾನೆ.
ಗಂಗಾವತಿಯ ಜಯನಗರದ ವಿಸ್ಡಂ ಆಂಗ್ಲ ಮಾಧ್ಯಮ ಶಾಲೆಯ ಮಾಲೀಕ ರಾಜಕಿರಣ್ ಇಂಗಲಳ್ಳಿ (36) ಕಾಲುವೆಗೆ ಬಿದ್ದಿದ್ದು ಎಂದು ಗೊತ್ತಾಗಿದ್ದು, ಹುಡುಕಾಟ ನಡೆದಿದೆ.
ವೈಯಕ್ತಿಕ ಸಮಸ್ಯೆಗಳ ಕಾರಣಕ್ಕೆ ಸಾಣಾಪುರ ಭಾಗಕ್ಕೆ ಬಂದು ಸತತವಾಗಿ ಮದ್ಯಸೇವನೆ ಮಾಡಿದ್ದ. ಕೆರೆಯತ್ತ ಕಾರಿನಲ್ಲಿ ಬಂದು ಜಂಗ್ಲಿ ಕ್ರಾಸ್ ಬಳಿ ವಾಂತಿ ಮಾಡುವುದಾಗಿ ಕಾಲುವೆಗೆ ಇಳಿದಿದ್ದ ಎಂದು ಮೂಲಗಳು ತಿಳಿಸಿವೆ. ಬಿದ್ದ ರಭಸಕ್ಕೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದಾಗ ಆತನ ರಕ್ಷಣೆಗೆ ಜೊತೆಯಲ್ಲಿದ್ದ ಶಾಲೆಯ ಸಿಬ್ಬಂದಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದರು. ನೀರಿನಲ್ಲಿ ಕೊಚ್ಚಿ ಹೋಗಿರುವ ವ್ಯಕ್ತಿಗಾಗಿ ತೆಪ್ಪದಲ್ಲಿ ಶೋಧ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.