ADVERTISEMENT

ಕೊಪ್ಪಳ | ದರ್ಗಾ ಮೇಲೆ ಅರೇಬಿಕ್ ಅಕ್ಷರಗಳುಳ್ಳ ರಾಷ್ಟ್ರಧ್ವಜ ಹಾರಾಟ; ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 15:29 IST
Last Updated 21 ಸೆಪ್ಟೆಂಬರ್ 2024, 15:29 IST
   

ಯಲಬುರ್ಗಾ (ಕೊಪ್ಪಳ ಜಿಲ್ಲೆ): ಪಟ್ಟಣದ ಬಿ.ಬಿ. ಫಾತೀಮಾ ದರ್ಗಾ ಮೇಲೆ ಅರೇಬಿಕ್‌ ಅಕ್ಷರಗಳುಳ್ಳ ತ್ರಿವರ್ಣ ಧ್ವಜ ಹಾರಿಸಲಾಗಿದ್ದು, ಈ ಕುರಿತು ಪೊಲೀಸರು ಶನಿವಾರ ಇಬ್ಬರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯಲಬುರ್ಗಾ ಪಟ್ಟಣದ ಮಹ್ಮದ್ ದಾನೀಶ್ ಕುತುಬುದ್ಧೀನ್ ಖಾಜಿ ಹಾಗೂ ಅವರ ಸಹೋದರ ಮಹ್ಮದ್ ಆದಿನಾನ್ ಖಾಜಿ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಈದ್ ಮಿಲಾದ್ ಆಚರಣೆ ವೇಳೆ ಬಟ್ಟೆಯಿಂದ ತ್ರಿವರ್ಣ ಧ್ವಜ ಹೊಲಿದು ಬಿಳಿಬಣ್ಣದ ಜಾಗದಲ್ಲಿ ಅಶೋಕ ಚಕ್ರದ ಬದಲಿಗೆ ಅರೇಬಿಕ್‌ ಅಕ್ಷರದಲ್ಲಿ ‘ಲಾ ಇಲ್ಲಾಹ ಇಲ್ಲಾಲ್ಲಾ ಮೊಹಮದ್ ರಸೂಲಲ್ಲಾ’ ಎಂದು ಬರೆಯಲಾಗಿತ್ತು. ಮದೀನಾ ಮಸೀದಿಯ ಚಿತ್ರವನ್ನು ಸಹ ಧ್ವಜದ ಮೇಲೆ ಚಿತ್ರಿಸಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆರೋಪಿಗಳು ಭಾರತದ ರಾಷ್ಟ್ರಧ್ವಜವನ್ನು ಅಪಮಾನ ಹಾಗೂ ವಿರೂಪಗೊಳಿಸುವ ಉದ್ದೇಶದಿಂದ ದರ್ಗಾ ಮೇಲೆ ಧ್ವಜ ಹಾರಿಸಿದ್ದಾಗಿ ಗೊತ್ತಾಗಿದೆ. ಸ್ಥಳೀಯ ಪೊಲೀಸ್‌ ಠಾಣೆಯ ಸಿಬ್ಬಂದಿ ಬಾಳನಗೌಡ ಪೊಲೀಸ್‍ಪಾಟೀಲ ನೀಡಿದ ದೂರಿನ ಮೇಲೆ ಈ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.