ADVERTISEMENT

ಕೊಪ್ಪಳ | ಗಣೇಶ ಹಬ್ಬ: ಅಶಾಂತಿ ಸೃಷ್ಟಿಸಿದರೆ ಕ್ರಮ

ಬೇವೂರು ಪೊಲೀಸ್‌ ಠಾಣೆಯಲ್ಲಿ ಶಾಂತಿಸಭೆ: ಪಿಎಸ್‍ಐ ಎಚ್.ಪ್ರಶಾಂತ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 3:18 IST
Last Updated 24 ಆಗಸ್ಟ್ 2025, 3:18 IST
ಯಲಬುರ್ಗಾ ತಾಲ್ಲೂಕಿನ ಬೇವೂರು ಗ್ರಾಮದ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಶಾಂತಿಸಭೆಯಲ್ಲಿ ಪಿಎಸ್‍ಐ ಪ್ರಶಾಂತ ಮಾತನಾಡಿದರು 
ಯಲಬುರ್ಗಾ ತಾಲ್ಲೂಕಿನ ಬೇವೂರು ಗ್ರಾಮದ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಶಾಂತಿಸಭೆಯಲ್ಲಿ ಪಿಎಸ್‍ಐ ಪ್ರಶಾಂತ ಮಾತನಾಡಿದರು    

ಯಲಬುರ್ಗಾ: ‘ಆಚರಣೆ ನೆಪದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಪಿಎಸ್‍ಐ ಎಚ್.ಪ್ರಶಾಂತ ಹೇಳಿದರು.

ತಾಲ್ಲೂಕಿನ ಬೇವೂರು ಪೊಲೀಸ್‌ ಠಾಣೆ ಆವರಣದಲ್ಲಿ ಗಣೇಶ ಹಬ್ಬದ ಪ್ರಯುಕ್ತ ನಡೆದ ಶಾಂತಿಸಭೆಯಲ್ಲಿ ಮಾತನಾಡಿದರು.

‘ಇಲ್ಲಿಯವರೆಗೂ ಇಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಶಾಂತಿಯಿಂದ ಹಬ್ಬಗಳನ್ನು ಆಚರಿಸುತ್ತಿರುವುದು ಕಂಡುಬಂದಿದೆ. ಮುಂದೆಯೂ ಅದೇ ರೀತಿಯಲ್ಲಿಯೇ ನಡೆದುಕೊಳ್ಳುವುದು ಅಗತ್ಯ’ ಎಂದರು.

ADVERTISEMENT

‘ಯುವಕರು ಅನಗತ್ಯವಾಗಿ ಗದ್ದಲ, ತಂಟೆ–ತಕರಾರುಗಳಲ್ಲಿ ಭಾಗಿಯಾಗಿ ಪರಿಸ್ಥಿತಿಯನ್ನು ಹದಗೆಡಿಸಲು ಮುಂದಾದರೆ ಕಾನೂನು ಕ್ರಮ ಕೈಗೊಳ್ಳುವುದು ನಿಶ್ಚಿತ. ಪಾಲಕರು ಮಕ್ಕಳ ನಡವಳಿಕೆ ಮತ್ತು ಹಾವಭಾವದ ಮೇಲೆ ನಿಗಾವಹಿಸಿ ಸರಿಯಾಗಿ ಇರುವಂತೆ ನೋಡಿಕೊಳ್ಳುವುದು ಅಗತ್ಯ’ ಎಂದು ಹೇಳಿದರು.

‘ಗ್ರಾಮದ ವಿವಿಧ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದು, ಈ ಸ್ಥಳಗಳಲ್ಲಿ, ಮೆರವಣಿಗೆ ಸಂದರ್ಭದಲ್ಲಿ ಡಿಜೆಯನ್ನು ಬಳಸುವಂತಿಲ್ಲ. ಧ್ವನಿವರ್ಧಕದ ಬಳಕೆಗೆ ಪಂಚಾಯಿತಿ ಮತ್ತು ಠಾಣೆಯಲ್ಲಿ ಪರವಾನಗಿ ಪಡೆದುಕೊಳ್ಳಬೇಕು. ನಿಗದಿತ ಸಮಯ ಮತ್ತು ಡೆಸಿಬಲ್‌ನಲ್ಲಿ ಮಾತ್ರ ಬಳಸಬೇಕು. ಪ್ರತಿಯೊಬ್ಬರೂ ಸಹಕರಿಸಿ ಸಂಭ್ರಮದಿಂದ ಹಬ್ಬದ ಆಚರಣೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಎಎಸ್‍ಐ ಶರಣಪ್ಪ ಈಬೇರಿ, ದಿನೇಶ ಕಲಕಬಂಡಿ, ಕಾಶಿನಾಥ ಗೊಂಗಡಶೆಟ್ಟಿ, ಬಾಲಪ್ಪ ಚಳ್ಳಾರಿ, ಬಸವರಾಜ ವಾಲಿಕಾರ, ಮುಖಂಡರಾದ ಬಸವರಾಜ ರ‍್ಯಾವಣಕಿ, ಪ್ರಕಾಶ ತಳವಾರ, ಹಿರಣ್ಯಾಕ್ಷಗೌಡ ಮಾಲಿಪಾಟೀಲ, ಗುರುಸಿದ್ದಯ್ಯ ಹಿರೇಮಠ, ಶಂಭುಗೌಡ ಪೊಲೀಸ್‍ ಪಾಟೀಲ, ಭೀಮೇಶ ಕರಡಿ, ಸಂದೇಶ ತುಪ್ಪದ, ನಾಗರಾಜ ಟಣಕನಕಲ್ಲ ಹಾಗೂ ಹನಮಗೌಡ ಮಾಲಿಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.