ADVERTISEMENT

ಕೊಪ್ಪಳ | ಮನಸ್ಸಿಗೆ ಮುದ ನೀಡುವ ಕಲಾಲೋಕ

ಮಂದರ್ತಿ ಮೇಳದಿಂದ ಶಿವಧೂತ ಪಂಜುರ್ಲಿ ಯಕ್ಷಗಾನ ಪ್ರದರ್ಶನ, ಕಲಾಪ್ರೇಮಿಗಳ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 6:29 IST
Last Updated 30 ಜುಲೈ 2023, 6:29 IST
ಕೊಪ್ಪಳದಲ್ಲಿ ಶನಿವಾರ ನಡೆದ ಯಕ್ಷಗಾನ ಪ್ರದರ್ಶನದ ಕಾರ್ಯಕ್ರಮವನ್ನು ಸಂಸದ ಸಂಗಣ್ಣ ಕರಡಿ ಉದ್ಘಾಟಿಸಿದರು
ಕೊಪ್ಪಳದಲ್ಲಿ ಶನಿವಾರ ನಡೆದ ಯಕ್ಷಗಾನ ಪ್ರದರ್ಶನದ ಕಾರ್ಯಕ್ರಮವನ್ನು ಸಂಸದ ಸಂಗಣ್ಣ ಕರಡಿ ಉದ್ಘಾಟಿಸಿದರು   

ಕೊಪ್ಪಳ: ‘ಜೀವನದಲ್ಲಿ ಕಲೆ, ಸಾಹಿತ್ಯ ಹಾಗೂ ಸಂಸ್ಕ್ರತಿ ಮನಸ್ಸಿಗೆ ಮುದ ನೀಡುತ್ತದೆ. ದೇಶವನ್ನು ಸಾಂಸ್ಕೃತಿಕವಾಗಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇವು ಪ್ರಧಾನ ಪಾತ್ರ ವಹಿಸುತ್ತದೆ’ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಕರಾವಳಿ ಬಳಗ ಕೊಪ್ಪಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಮತ್ತು ಕಲರವ ಶಿಕ್ಷಕರ ಸೇವಾ ಬಳಗದ ಸಹಯೋಗದಲ್ಲಿ ಇಲ್ಲಿನ ಸಾಹಿತ್ಯ ಭವನದಲ್ಲಿ ಶನಿವಾರ ನಡೂರು ಮಂದರ್ತಿಯ ಮಹಾಗಣಪತಿ ಯಕ್ಷ ಮಂಡಳಿ ವತಿಯಿಂದ ನಡೆದ ಯಕ್ಷಗಾನ ಪ್ರದರ್ಶನದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಮಾಜಿಕ ಸಂದೇಶಗಳನ್ನು ‌ನೀಡುವ ಮೂಲಕ ಯಕ್ಷಗಾನ ಹಾಗೂ ಸಾಹಿತ್ಯ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತದೆ‌. ಆರೋಗ್ಯಕರ ಹಾಗೂ ಸಾಂಸ್ಕ್ರತಿಕ ಜಗತ್ತು ಕಟ್ಟಲು ಇಂಥ ಕಾರ್ಯಕ್ರಮಗಳು ಸೇತುವೆಯಾಗುತ್ತವೆ. ಹೋಟೆಲ್ ‌ಉದ್ಯಮಿಗಳು ದುಡಿಮೆಯನ್ನೇ ನಂಬಿಕೊಂಡು ಬದುಕುತ್ತಿದ್ದಾರೆ‌. ದೇಶದ ಆರ್ಥಿಕ ಪ್ರಗತಿಗೂ ನೆರವಾಗುತ್ತಿದ್ದಾರೆ. ಎಲ್ಲರೂ ಸೇರಿ ಕಲೆ, ಸಾಹಿತ್ಯ ಹಾಗೂ ಸಂಸ್ಕ್ರತಿ ಉಳಿಸಬೇಕಾಗಿದೆ. ಇವುಗಳು ಉಳಿದರೆ ದೇಶ ಬೆಳಗುತ್ತದೆ. ಅಧರ್ಮದಲ್ಲಿ ನಡೆಯಬಾರದು ಎಂದು ಹೇಳಿಕೊಡುವುದೇ‌ ಕಲೆ ಹಾಗೂ ಸಂಸ್ಕ್ರತಿಯ ಉದ್ದೇಶ. ನವ ಪೀಳಿಗೆಯವರಿಗೆ ಸಂಸ್ಕ್ರತಿ ತಿಳಿಸಿಕೊಡಲು ಯಕ್ಷಗಾನ ಆಯೋಜಿಸಿದ್ದು ಶ್ಲಾಘನೀಯ’ ಎಂದರು.

ADVERTISEMENT

ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜ ಜುಮ್ಮಣ್ಣನವರ ಮಾತನಾಡಿ ‘ಹೋಟೆಲ್ ಉದ್ಯಮಿಗಳು ಎಲ್ಲರನ್ನೂ ಪ್ರೀತಿಯಿಂದ ಕಂಡಿದ್ದಾರೆ. ಉತ್ತರ ಕರ್ನಾಟಕದ ಬಯಲಾಟಕ್ಕೂ, ದಕ್ಷಿಣ ಭಾಗದ ಯಕ್ಷಗಾನಕ್ಕೂ ಸಾಮ್ಯತೆಯಿದೆ’ ಎಂದು ಹೇಳಿದರು.

ಹೋಟೆಲ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಶಶಿಕರ ಶೆಟ್ಟಿ, ನಗರಸಭಾ ಸದಸ್ಯ ಅರುಣಶೆಟ್ಟಿ, ಜೀವನ ಶೆಟ್ಟಿ, ಕೊಪ್ಪಳ ಹೋಟೆಲ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷರಾದ ಸಂಜೀವ ಶೆಟ್ಟಿ ಮತ್ತು ವಾಸು, ಮಂದರ್ತಿ ಮೇಳದ ಭಾಗವತರಾದ ಸದಾಶಿವ ಅಮೀನ, ಸಾಹಿತಿ ಮಹಾಂತೇಶ ಮಲ್ಲನಗೌಡರ, ಕಲರವ ಬಳಗದ ಪ್ರಧಾನ ಕಾರ್ಯದರ್ಶಿ ಪ್ರಾಣೇಶ ಪೂಜಾರ, ವೈದ್ಯ ಮಹೇಂದ್ರ ಕಿಂದ್ರೆ, ಉದ್ಯಮಿಗಳಾದ ಶಶಿಧರ ಶೆಟ್ಟಿ, ವಿಜಯ ಶೆಟ್ಟಿ, ಜೀವನ ಶೆಟ್ಟಿ, ಸಂಜೀವ ರಾವ್, ಸಂತೋಷ ಶೆಟ್ಟಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮನಗೆದ್ದ ಯಕ್ಷಗಾನ: ಕಲಾವಿದರ ಮನೋಜ್ಞ ಅಭಿನಯ ಕಲಾಪ್ರೇಮಿಗಳ ಮನಸೂರೆಗೊಂಡಿತು. ಕಾಂತಾರ ಚಲನಚಿತ್ರವನ್ನು ನೆನಪಿಸುವ ಹಲವು ವಿಶೇಷ ದೃಶ್ಯಗಳು, ವಿಶೇಷ ರೀತಿಯಲ್ಲಿ ಪಂಜುರ್ಲಿಯ ಪ್ರವೇಶ ಕಲಾಪ್ರೇಮಿಗಳ ಕಣ್ಮನ ಸೆಳೆಯಿತು.

ಯಕ್ಷಗಾನ ಆಯೋಜನೆಗೆ ಜನಪ್ರತಿನಿಧಿಗಳ ಹರ್ಷ  ಯಕ್ಷಗಾನ ಪ್ರದರ್ಶನಕ್ಕೂ ಮೊದಲು ವಿಘ್ನ ನಿವಾರಕನ ಪೂಜೆ  ಕಾಂತಾರ ದೃಶ್ಯ ನೆನಪಿಸಿದ ಯಕ್ಷಗಾನದ ಪ್ರಸಂಗಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.