ADVERTISEMENT

ನೌಕರರ ಬಲ ಸಂಘಟನೆಗೂ ಶಕ್ತಿ: ಕೆಪಿಟಿಸಿಎಲ್‌, ಎಸ್ಕಾಂ ನೌಕರರ ರಾಜ್ಯಮಟ್ಟದ ಸಮಾವೇಶ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 20:17 IST
Last Updated 14 ಸೆಪ್ಟೆಂಬರ್ 2025, 20:17 IST
<div class="paragraphs"><p>ಕೊಪ್ಪಳದಲ್ಲಿ ಭಾನುವಾರ ನಡೆದ&nbsp;ಕೆಪಿಟಿಸಿಎಲ್‌ ಮತ್ತು ವಿವಿಧ ಎಸ್ಕಾಂಗಳ ವೀರಶೈವ ಲಿಂಗಾಯತರ ವೇದಿಕೆ ರಾಜ್ಯಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪದಾಧಿಕಾರಿಗಳು</p></div>

ಕೊಪ್ಪಳದಲ್ಲಿ ಭಾನುವಾರ ನಡೆದ ಕೆಪಿಟಿಸಿಎಲ್‌ ಮತ್ತು ವಿವಿಧ ಎಸ್ಕಾಂಗಳ ವೀರಶೈವ ಲಿಂಗಾಯತರ ವೇದಿಕೆ ರಾಜ್ಯಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪದಾಧಿಕಾರಿಗಳು

   

–ಪ್ರಜಾವಾಣಿ ಚಿತ್ರ

ಕೊಪ್ಪಳ: ‘ಕೆಪಿಟಿಸಿಎಲ್‌ ಮತ್ತು ವಿವಿಧ ಎಸ್ಕಾಂಗಳ ವೀರಶೈವ ಲಿಂಗಾಯತರ ವೇದಿಕೆ ಸಂಘಟನೆಯು ಸಾಕಷ್ಟು ನೌಕರರ ಬಲದಿಂದಾಗಿ ಬಲಿಷ್ಠವಾಗಿದೆ’ ಎಂದು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ಮತ್ತು ಎಸ್ಕಾಂಗಳ ವೀರಶೈವ ಲಿಂಗಾಯತರ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ರು.ಪ್ರಕಾಶ ಹೇಳಿದರು.

ADVERTISEMENT

ಲಿಂಗಾಯತರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿರಲಿಲ್ಲ ಎಂಬ ಕಾರಣಕ್ಕಾಗಿ ಈ ವೇದಿಕೆಯು ಅಸ್ತಿತ್ವಕ್ಕೆ ಬಂದಿದೆ ಎಂದು ಭಾನುವಾರ ವೇದಿಕೆಯ 3ನೇ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಹೇಳಿದರು.

‘ಕೇವಲ ವ್ಯಾಟ್ಸ್‌ಆ್ಯಪ್‌ ಗ್ರೂಪ್‌ ಆಗಿದ್ದ ವೇದಿಕೆಯು ಅನೇಕ ಮುಖಂಡರ ಶ್ರಮದಿಂದಾಗಿ ಈಗ ಸಂಘಟನೆಯ ರೂಪವನ್ನು ಪಡೆದುಕೊಂಡಿದೆ’ ಎಂದು ಅಭಿಪ್ರಾಯಪಟ್ಟರು. 

ಹೂವಿನಹಡಗಲಿಯ ಗವಿಸಿದ್ಧೇಶ್ವರ ಶಾಖಾಮಠದ ಹಿರಿಶಾಂತವೀರ ಸ್ವಾಮೀಜಿ ಅವರು ಮಾತನಾಡಿದರು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ವೇದಿಕೆಯ ಸದಸ್ಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.