ADVERTISEMENT

ಕುಷ್ಟಗಿ: ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 5:52 IST
Last Updated 27 ಡಿಸೆಂಬರ್ 2025, 5:52 IST
ಕುಷ್ಟಗಿಯಲ್ಲಿ ಶುಕ್ರವಾರ ನಡೆದ ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿಯ ಮೆರವಣಿಗೆಯಲ್ಲಿ ಮಾಲಾಧಾರಿಗಳು ಪಾಲ್ಗೊಂಡಿದ್ದರು
ಕುಷ್ಟಗಿಯಲ್ಲಿ ಶುಕ್ರವಾರ ನಡೆದ ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿಯ ಮೆರವಣಿಗೆಯಲ್ಲಿ ಮಾಲಾಧಾರಿಗಳು ಪಾಲ್ಗೊಂಡಿದ್ದರು   

ಕುಷ್ಟಗಿ: ಪಟ್ಟಣದಲ್ಲಿ ಶಬರಿಮಲೆ ಅಯ್ಯಪ್ಪಸ್ವಾಮಿ ಮಂಡಲ ಪೂಜೆ ನಿಮಿತ್ತ ಶುಕ್ರವಾರ ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು.

ದುರ್ಗಾಪರಮೇಶ್ವರಿ ದೇವಿ ಆಶ್ರಮದ ಸದಾನಂದ ಶ್ರೀ ಉತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆಯಲ್ಲಿ ಸಾಕಷ್ಟು ಸಂಖ್ಯೆ ಅಯ್ಯಪ್ಪಸ್ವಾಮಿ ಭಕ್ತರು ಪಾಲ್ಗೊಂಡಿದ್ದರು. ಉತ್ಸವದ ನಿಮಿತ್ತ ಪ್ರಮುಖರ ವೃತ್ತಗಳು, ಮಾರ್ಗಗಳನ್ನು ತಳಿರುತೋರಣ, ಬಾಳೆ ಕಂಬಗಳನ್ನು ಕಟ್ಟಿ ಅಲಂಕರಿಸಲಾಗಿತ್ತು.

ADVERTISEMENT

ಬ್ರಾಹ್ಮಿ ಮುಹೂರ್ತದಲ್ಲಿ ತ್ರಿಮೂರ್ತಿಗಳಿಗೆ ಅಭಿಷೇಕ, ಗಣಪತಿ ಹೋಮ ಇತರೆ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ಮಲ್ಲಯ್ಯ ಗುರುಸ್ವಾಮಿ, ಕಿಶೋರ ಗುರುಸ್ವಾಮಿ, ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಟ್ರಸ್ಟ್‌ನ ಪ್ರಮುಖರು, ಯಲ್ಲಪ್ಪ, ಭಜಂತ್ರಿ, ಮಂಜುನಾಥ ಹಿರೇಮಠ್, ಪರಸಪ್ಪ, ಬೋದೂರು, ಮಂಜು ಕಾರಟಗಿ, ಗಂಗಾಧರ, ಶಶಿ ನಾಯಕ, ಬಸವರಾಜ ಹೊಸವಕ್ಕಲ, ಶರಣಪ್ಪ ಕಂದಕೂರು, ದೇವೇಂದ್ರಪ್ಪ ಕಂದಕೂರು, ರಮೇಶ ಕೊನಸಾಗರ, ರವಿ ಹಡಪದ, ವೀರೇಶ, ಹನಮೇಶ ಭೋವಿ, ಸೋಮು ಹಂಚಿನಾಳ, ಶರಣು ಹನಮಸಾಗರ, ಹನಮಂತ ಭಜಂತ್ರಿ, ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು, ಅಯ್ಯಪ್ಪ ಸ್ವಾಮಿ ಭಕ್ತರು ಇದ್ದರು.

ಡಿ.27 ರಂದು ಅಯ್ಯಪ್ಪಸ್ವಾಮಿ ಮಂಡಲಪೂಜೆ ನಡೆಯಲಿದೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.