
ಅಳವಂಡಿ: ಮಕ್ಕಳು ತಮ್ಮ ಹಕ್ಕುಗಳು ಹಾಗೂ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು. ಪಾಲಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಪಿಡಿಒ ಬಸವರಾಜ ಕೀರ್ದಿ ಹೇಳಿದರು.
ಸಮೀಪದ ಬಿಸರಹಳ್ಳಿ ಗ್ರಾಮದಲ್ಲಿ ಸ್ಥಳೀಯ ಪಂಚಾಯಿತಿ ಹಾಗೂ ವಿವಿಧ ಇಲಾಖೆ ಸಹಯೋಗದಲ್ಲಿ ನಡೆದ ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ಶಿಕ್ಷಣವೆಂಬ ಆಸ್ತಿಯನ್ನು ಮಕ್ಕಳಿಗೆ ಕೊಡುಗೆಯಾಗಿ ನೀಡಬೇಕು. ಮಕ್ಕಳ ಹಕ್ಕುಗಳ ರಕ್ಷಣೆ ಅತ್ಯಗತ್ಯ. ಸರ್ಕಾರ ಜಾರಿಗೊಳಿಸಿದ ಶೈಕ್ಷಣಕ ಸೌಲಭ್ಯಗಳನ್ನು ಮಕ್ಕಳು ಸರಿಯಾಗಿ ಬಳಸಿಕೊಂಡು ಪ್ರಗತಿ ಹೊಂದಬೇಕು ಎಂದು ಸಲಹೆ ನೀಡಿದರು.
ಸಿಆರ್‌ಪಿ ಆರ್.ಬಿ.ಬಸವರಾಜ ಮಾತನಾಡಿ, ಮಕ್ಕಳೆ ದೇಶದ ಆಸ್ತಿಯಾಗಿದ್ದು, ಅವರು ಸದೃಢ ಹಾಗೂ ಆರೋಗ್ಯಕರವಾಗಿರುವುದು ಅವಶ್ಯವಾಗಿದೆ. ಕಡ್ಡಾಯ ಶಿಕ್ಷಣ ನೀತಿ ಜಾರಿಯಲ್ಲಿದ್ದು, ಪ್ರತಿಯೊಂದು ಮಗುವಿಗೆ ಶಿಕ್ಷಣದ ಹಕ್ಕಿದೆ. ಪಾಲಕರು ಯಾವುದೇ ಕಾರಣಕ್ಕೂ ಮಕ್ಕಳನ್ನು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಮಕ್ಕಳ ಶಿಕ್ಷಣಕ್ಕೆ ಅವಶ್ಯವಾದ ಮೂಲ ಸೌಕರ್ಯಗಳನ್ನು ಸ್ಥಳೀಯ ಆಡಳಿತ ನೀಡಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರವೀಂದ್ರಗೌಡ ಮಾಲಿಪಾಟೀಲ, ಪ್ರಮುಖರಾದ ನಾಗಪ್ಪ ಬಿಕನಳ್ಳಿ, ಪಾರ್ವತಿ, ಅನ್ನಪೂರ್ಣ, ಬಸವರಾಜ, ಆನಂದಪ್ಪ ಮೇಗಳಮನಿ, ರೇಣುಕಾ, ಅಂಗನವಾಡಿ ಮೇಲ್ವಿಚಾರಕಿ ವಿಶಾಲಾಕ್ಷಿ, ಕೆಎಚ್‌ಪಿಟಿಯ ಯಲ್ಲಪ್ಪ ಮೆಣೆಗಾರ, ಮುಖ್ಯ ಶಿಕ್ಷಕರಾದ ಶಾಂತವೀರಪ್ಪ, ಹನುಮಪ್ಪ, ಬಸವರಾಜ, ಹನುಮಂತಪ್ಪ, ಗವಿಕುಮಾರ, ಕುಮಾರ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ , ಶಿಕ್ಷಕರು, ಮಕ್ಕಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.