ADVERTISEMENT

ಗಂಗಾವತಿ: ಬೋನಿಗೆ ಬಿದ್ದ ಮೂರು ವರ್ಷದ ಚಿರತೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2025, 6:55 IST
Last Updated 29 ನವೆಂಬರ್ 2025, 6:55 IST
<div class="paragraphs"><p>ಗ್ರಾಮದ ಸಮೀಪ ಅಂಜನಾದ್ರಿ ಬೆಟ್ಟದ ಪಾದಗಟ್ಟೆಗೆ ತೆರಳುವ ಮಣ್ಣಿನ ರಸ್ತೆಯಲ್ಲಿನ ಸಣ್ಣ ಬೆಟ್ಟದಲ್ಲಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಚಿರತೆಯೊಂದು ಬಿದ್ದಿರುವುದು</p></div>

ಗ್ರಾಮದ ಸಮೀಪ ಅಂಜನಾದ್ರಿ ಬೆಟ್ಟದ ಪಾದಗಟ್ಟೆಗೆ ತೆರಳುವ ಮಣ್ಣಿನ ರಸ್ತೆಯಲ್ಲಿನ ಸಣ್ಣ ಬೆಟ್ಟದಲ್ಲಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಚಿರತೆಯೊಂದು ಬಿದ್ದಿರುವುದು

   

ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರ-2 ಗ್ರಾಮದ ಸಮೀಪ ಅಂಜನಾದ್ರಿ ಬೆಟ್ಟದ ಪಾದಗಟ್ಟೆಗೆ ತೆರಳುವ ಮಣ್ಣಿನ ರಸ್ತೆಯಲ್ಲಿನ ಸಣ್ಣ ಬೆಟ್ಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಮೂರು ವರ್ಷದ ಚಿರತೆಯೊಂದು ಸೆರೆಸಿಕ್ಕಿದೆ.

ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲಾ ವಿಸರ್ಜನಾ ಕಾರ್ಯಕ್ರಮದ ಸಿದ್ದತೆಗಳು ಭರ್ಜರಿಯಾಗಿ ನಡೆದಿವೆ. ಅಂಜನಾದ್ರಿ ಮುಂಭಾಗದಿಂದ ಬೆಟ್ಟ ಏರಿ, ಹಿಂಬದಿಯಿಂದ ಇಳಿದು ವೇದಪಾಠ ಶಾಲೆಯ ಬಳಿ ಊಟ ಮಾಡಿ, ಚಿಕ್ಕರಾಂಪುರ-2 ಗ್ರಾಮದ ಬಳಿನ ಮಣ್ಣಿನ ರಸ್ತೆ ಮೂಲಕ ಅಂಜನಾದ್ರಿ ಮುಖದ್ವಾರಕ್ಕೆ ತೆರಳಬೇಕಿದೆ‌.

ಇದೀಗ ಅದೇ ಮಣ್ಣಿನ ರಸ್ತೆ ಬಳಿನ ಸಣ್ಣ ಗುಡ್ಡದ ಪ್ರದೇಶದಲ್ಲಿ ಹೆಣ್ಣು ಚಿರತೆಯೊಂದು ಸೆರೆಯಾಗಿದ್ದು, ಹನುಮಮಾಲಾ ವಿಸರ್ಜನೆಗೂ ಮುನ್ನ ಮಾಲಾಧಾರಿಗಳಿಗೆ ಭಯದ ಆತಂಕ ಎದುರಾಗಿದೆ. ಹನುಮಮಾಲಾ ವಿಸರ್ಜನೆ ಪೂರ್ವ ಸಿದ್ದತೆಗಳ ಸಭೆಗಳಲ್ಲಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ ಎಲ್ಲರೂ ವನ್ಯಜೀವಗಳಿಂದ ಆಗುವ ಅನಾಹುತಕ್ಕೆ ಕ್ರಮ ಜರುಗಿಸಲು ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ಅಂಜನಾದ್ರಿ ಬೆಟ್ಟದ ಸುತ್ತಮುತ್ತ ಚಿರತೆ ಪದೆ,‌ ಪದೆ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ತುಸು ಭಯದ ವಾತವರಣವು ಸೃಷ್ಟಿಯಾಗಿತ್ತು. ಅರಣ್ಯ ಇಲಾಖೆ ಗುರುವಾರ ಚಿರತೆ ಸೆರೆಗೆ ಬೋನು ಇರಿಸಿದ್ದು, ಶುಕ್ರವಾರ ಬೆಳಿಗ್ಗೆ ಚಿರತೆ ಸೆರೆಯಾಗಿದೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ, ಪರಿಶೀಲಿಸಿದರು. ನಂತರ ಚಿರತೆ ಆರೋಗ್ಯವಾಗಿರುವುದು ಕಂಡು ಮೇಲಾಧಿಕಾರಿಗಳ ಸೂಚನೆಯಂತೆ ದೂರದ ಸಂರಕ್ಷಿತ ಪ್ರದೇಶಕ್ಕೆ ಕಳುಹಿಸಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಚಿರತೆ ವೀಕ್ಷಣೆಗೆ ಚಿಕ್ಕರಾಂಪುರ-2 ಗ್ರಾಮದಿಂದ ಸಾಕಷ್ಟು ಜನ ಮಹಿಳೆಯರು, ಮಕ್ಕಳು, ಯುವಕರು ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.