ADVERTISEMENT

ಸುಸ್ಥಿರ ಸಮಾಜ ನಿರ್ಮಾಣಕ್ಕಾಗಿ ಸಾಕ್ಷರತೆ ಸಾಧನ: ಟಿ. ಕೃಷ್ಣಮೂರ್ತಿ

ತಳಕಲ್ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 7:14 IST
Last Updated 11 ಸೆಪ್ಟೆಂಬರ್ 2025, 7:14 IST
ಕುಕನೂರು ತಾಲ್ಲೂಕಿನ ತಳಕಲ್ ಗ್ರಾಮದಲ್ಲಿ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ. ಕೃಷ್ಣಮೂರ್ತಿ ಮಾತನಾಡಿದರು
ಕುಕನೂರು ತಾಲ್ಲೂಕಿನ ತಳಕಲ್ ಗ್ರಾಮದಲ್ಲಿ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ. ಕೃಷ್ಣಮೂರ್ತಿ ಮಾತನಾಡಿದರು   

ಕುಕನೂರು: ‘ಸುಸ್ಥಿರ ಸಮಾಜ ನಿರ್ಮಾಣಕ್ಕಾಗಿ ಅಕ್ಷರ ಒಂದು ಸಾಧನ’ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ. ಕೃಷ್ಣಮೂರ್ತಿ ಹೇಳಿದರು.

ತಾಲ್ಲೂಕಿನ ತಳಕಲ್ ಗ್ರಾಮದಲ್ಲಿ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರದೇಶದ ಸಾಕ್ಷರತಾ ಪ್ರಮಾಣವನ್ನು ಪ್ರಾಮಾಣಿವಾಗಿ ಹೆಚ್ಚಿಸಲು ಶ್ರಮವಹಿಸಿ ಕಾರ್ಯನಿರ್ವಹಿಸಬೇಕು. ಸಾಕ್ಷರತೆಯ ಮೂಲಕ ಶೋಷಣೆ ರಹಿತ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಬೇಕು’ ಎಂದರು.

ADVERTISEMENT

‘ಅಕ್ಷರದ ಮೂಲಕ ಅರಿವು ಮೂಡಿಸಿ ಅನಕ್ಷರಸ್ಥರನ್ನು ಕ್ರಿಯಾಶೀಲರನ್ನಾಗಿ ಮಾಡಬೇಕು. ಸಾಕ್ಷರತೆಯು ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಬದುಕಿನ ಶಿಕ್ಷಣ ನೀಡಿ ಸಾಕ್ಷರತಾ ಭಾರತವನ್ನು ಕಟ್ಟಬೇಕು’ ಎಂದರು.

ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಹಿರಾಬೇಗಂ ಜಾಕೀರ್ ಹುಸೇನ್ ಕೊಪ್ಪಳ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಲ್.ಡಿ ಜೋಷಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಗೌಡ್ರು, ಚಂದ್ರಪ್ಪ ಬಂಡಿ, ಉಪಾಧ್ಯಕ್ಷ ಜಿಂದಾಬಿ ಗುಡುಗುಡಿ, ವಿರನಗೌಡ್ರ ಚೆನ್ನವೀರಗೌಡ್ರ ತಿಮ್ಮಣ್ಣ ಚೌಡಿ, ಮಹಮ್ಮದ್ ರಾಜುುದ್ದೀನ್ ಕೊಪ್ಪಳ, ಉಮೇಶ್ ಗೌಡ್ರ ಪೊಲೀಸ್ ಪಾಟೀಲ, ಶ್ರೀಧರ್ ಹಣವಾಳ, ವಿರೇಶ್ ಬಿಸನಳ್ಳಿ, ಕವಿತಾ ಮಲ್ಲಿಕಾರ್ಜುನ್ ಚಲವಾದಿ, ಎಚ್.ಕೆ. ಹೈತಾಪುರ್, ಗೀತಾ ತತ್ತಿ, ಚೈತ್ರ ಹಿರೇಗೌಡ್ರು, ದೇವಕ್ಕ ಬಂಗಿ, ವಿಜಯಲಕ್ಷ್ಮಿ ಹಿಂದಲಮನಿ, ರೇಣುಕಾ ಮಡಿವಾಳರ್ ಭಾಗಿಯಾಗಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.