ADVERTISEMENT

ನೊಂದವರ ಪರ ಸಾಹಿತ್ಯ ಸೃಷ್ಟಿಯಾಗಲಿ: ಸಾಹಿತಿ ಅಲ್ಲಾಗಿರಿರಾಜ

‘ಒಡಲೊಳಗಿನ‌ ಭಾವ’ ಕವನ‌ ಸಂಕಲನ ಬಿಡುಗಡೆ, ಸಾಹಿತಿ ಅಲ್ಲಾಗಿರಿರಾಜ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 4:47 IST
Last Updated 21 ಫೆಬ್ರುವರಿ 2026, 4:47 IST
ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕನಕಪ್ಪ ದಂಡಿನ‌ ಅವರ ಒಡಲೊಳಗಿನ‌ಭಾವ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವನ್ನು ಶೇಖರಗೌಡ ಮಾಲಿಪಾಟೀಲ ಅವರು ಉದ್ಘಾಟಿಸಿದರು
ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕನಕಪ್ಪ ದಂಡಿನ‌ ಅವರ ಒಡಲೊಳಗಿನ‌ಭಾವ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವನ್ನು ಶೇಖರಗೌಡ ಮಾಲಿಪಾಟೀಲ ಅವರು ಉದ್ಘಾಟಿಸಿದರು   

ಕನಕಗಿರಿ: ‘ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರ ದುರಾಡಳಿತ ಹಾಗೂ ಸರ್ವಾಧಿಕಾರಿ ಧೋರಣೆಯಿಂದ ರಾಜ್ಯದಲ್ಲಿ ಕಸಾಪ‌ ಚಟುವಟಿಕೆಗಳು‌ ಕ್ಷೀಣಿಸಿವೆ’ ಎಂದು ಸಾಹಿತಿ ಶೇಖರಗೌಡ ಮಾಲಿಪಾಟೀಲ ಗುಮಗೇರಾ ತಿಳಿಸಿದರು.

ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕನ್ನಡ ಸಾಹಿತ್ಯ‌ ಪರಿಷತ್ತು‌ ಜಿಲ್ಲಾ ಘಟಕದ ಹಾಗೂ ತಾಲ್ಲೂಕು ಘಟಕ, ಪ್ರತಿಮಾ-ಸೃಷ್ಠಿ ಪ್ರಕಾಶನ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ನಿವೃತ್ತ ಶಿಕ್ಷಕ ಕನಕಪ್ಪ ದಂಡಿನ‌ ಅವರ ‘ಒಡಲೊಳಗಿನ‌ ಭಾವ’ ಕವನ‌ ಸಂಕಲನ ಬಿಡುಗಡೆ, ಸಾಧಕರಿಗೆ ಸನ್ಮಾನ ಮತ್ತು ಜನಪದ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಸಾಪ ಚಟುವಟಿಕೆ ಹಾಗೂ ಸಾಹಿತ್ಯ ಸಮ್ಮೇಳನಗಳಿಗೆ ಅನುದಾನ‌ ಬಿಡುಗಡೆ ಮಾಡುವಲ್ಲಿ ತಮಗೆ ಬೆಂಬಲಿಸಿದವರಿಗೆ ಮಾತ್ರ ಜೋಶಿ ಮಣೆ ಹಾಕಿ ವಿರೋಧಿಗಳಿಗೆ ಹಣ‌ ನೀಡದೆ ದ್ವೇಷ ಸಾಧಿಸಿದರು. ಹೀಗಾಗಿ ಎಲ್ಲಿಯೂ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿಲ್ಲ. ಆಡಳಿತಾಧಿಕಾರಿ ಬಂದ‌ ಮೇಲೆ ಈಗ ಕಸಾಪಕ್ಕೆ ಶಕ್ತಿ ಬಂದಿದೆ’ ಎಂದು‌ ತಿಳಿಸಿದರು.

ADVERTISEMENT

ಸಾಹಿತಿ ಅಲ್ಲಾಗಿರಿರಾಜ ಮಾತನಾಡಿ, ‘ಸಾಹಿತ್ಯವನ್ನು ಶ್ರೀಮಂತಗೊಳಿಸುವುದರ ಜತೆಗೆ ಸಾಹಿತಿ ಸಹ ಶ್ರೀಮಂತನಾಗಬೇಕು, ಪುಸ್ತಕ ಪ್ರಕಟಣೆಗೆ ಸಾಲ ಮಾಡಿ ಬಡವನಾಗಬಾರದು. ಪ್ರತಿಯೊಂದು ಮನೆಯಲ್ಲಿಯೂ ಸಾಹಿತಿಗಳು ಹುಟ್ಟಬೇಕು, ಬಡತನ, ಶೋಷಣೆ, ದಲಿತ, ಬಂಡಾಯ,‌ ಮಹಿಳಾ ವೇದನೆಯ ಅಂಶಗಳು ಸಾಹಿತ್ಯದಲ್ಲಿರಬೇಕು’ ಎಂದು ಸಲಹೆ ನೀಡಿದರು.

ನಿವೃತ್ತ ಪ್ರಾಂಶುಪಾಲ‌ ಜಿ.ಅನಿಲಕುಮಾರ, ಚಿಂತಕ ಡಿ.‌ಕೆ.‌ಮಾಳಿ, ಸಾಹಿತಿ ಅಜಮೀರ ನಂದಾಪುರ, ಜಿಪಂ ಮಾಜಿ ಸದಸ್ಯ ಹನುಮೇಶ ನಾಯಕ,‌ ಎಪಿಎಂಸಿ ಮಾಜಿ ಅಧ್ಯಕ್ಷ ಡಿ.ಎಂ.‌ಅರವಟಗಿಮಠ, ಮುಖಂಡ ಸಿದ್ದಪ್ಪ ನೀರ್ಲೂಟಿ, ಕವಿ ಕನಕಪ್ಪ ದಂಡೀನ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮೆಹಬೂಬಹುಸೇನ ಮಾತನಾಡಿದರು.

ಪಪಂ ಅಧ್ಯಕ್ಷೆ ತನುಶ್ರೀ ಟಿಜೆ. ರಾಮಚಂದ್ರ, ಕಸಾಪ ಜಿಲ್ಲಾಧ್ಯಕ್ಷ ಶರಣೆಗೌಡ ಪೊಲೀಸ್ ಪಾಟೀಲ, ಪಪಂ ಉಪಾಧ್ಯಕ್ಷ ಕಂಠಿರಂಗ ನಾಯಕ, ಶರಣಬಸಪ್ಪ ಭತ್ತದ, ವಿರುಪಣ್ಣ‌ ಕಲ್ಲೂರು, ಶಿವರೆಡ್ಡಿ ಖ್ಯಾಡೆದ, ಮಲ್ಲಿಕಾರ್ಜುನಗೌಡ, ವೆಂಕಟೇಶ ಕುಲಕರ್ಣಿ, ಬಸಂತಗೌಡ, ಜಗದೀಶ ಹಾದಿಮನಿ, ಜಂಬಣ್ಣ ದಂಡಿನ, ತಾಪಂ ಪ್ರಭಾರ ಇಒ ರಾಜಶೇಖರ, ವಿರೂಪಾಕ್ಷಯ್ಯ,  ಶಂಶಾದಬೇಗ್ಂ, ಅಮರೇಶ ದೇವರಾಳ, ಈಶ್ವರ ಹಲಗಿ, ಶಿವಕುಮಾರ ಇದ್ದರು.

ಮೆಹಬೂಬಹುಸೇನ‌ ಬೇವಿನಾಳ, ಮಂಜುನಾಥರೆಡ್ಡಿ ಮಾದಿನಾಳ, ಮಾರುತಿ ಪೂಜಾರ, ಯಂಕೋಬ ಸಂಕನಾಳ, ದುರಗಪ್ಪ ವಣಿಕೇರಿ,‌ ಜಯಲಕ್ಷ್ಮೀ ವಾಲ್ಮೀಕಿ, ಛತ್ರಪ್ಪ ತಂಬೂರಿ, ಎಂ. ಬಿ.‌ಕುಕನೂರು, ಡಿ.‌ಕನಕಪ್ಪ, ಶಾಮೀದಸಾಬ ಲೈನದಾರ, ಮಲ್ಲಿಕಾರ್ಜುನ ಮಸಾರಿಕ್ಯಾಂಪ್ ಅವರನ್ನು ಸನ್ಮಾನಿಸಲಾಯಿತು.

ಗಾಯಕ ಮೆಹಬೂಬ ಕಿಲ್ಲೇದಾರ ಅವರಿಂದ ಜನಪದ ಸಂಭ್ರಮ ಕಾರ್ಯಕ್ರಮ ನಡೆಯಿತು. ಪ್ರತಿಮಾ‌ ಪ್ರಾರ್ಥಿಸಿದರು. ಭವಾನಿ ಸಂಗಡಿಗರು ನಾಡಗೀತೆ ಹಾಡಿದರು. ಬಾಲಾಜಿ ಸ್ವಾಗತಿಸಿದರು. ಪರಸಪ್ಪ ಹೊರಪೇಟೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.