ಕನಕಗಿರಿ: ಇಲ್ಲಿಗೆ ಸಮೀಪದ ಹನುಮನಾಳ ಗ್ರಾಮದ ಬಸಣ್ಣ ದೇವರ ಜಾತ್ರಾ ಮಹೋತ್ಸವ, ಪುರಾಣ ಮಂಗಲ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಮಂಗಳವಾರ ನಡೆದವು.
ಈ ನಿಮಿತ್ತ ಬೆಳಿಗ್ಗೆ ದೇವಾಲಯದಲ್ಲಿ ರುದ್ರಾಭಿಷೇಕ, ಪ್ರಸಾದ, ನೈವೇದ್ಯ ಊಟಗನೂರು ತಾತನವರ ಭಾವಚಿತ್ರದ ಮೆರವಣಿಗೆ ಸೇರಿ ಇತರೆ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆದವು.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ ಮಾತನಾಡಿ, ಸಾಮೂಹಿಕ ವಿವಾಹಗಳು ಬಡವರಿಗೆ ಆರ್ಥಿಕ ಹೊರೆಯನ್ನು ತಗ್ಗಿಸುತ್ತವೆ. ಇಂಥ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡುವವರು ಧನ್ಯರು. ಗ್ರಾಮದಲ್ಲಿ ಒಗ್ಗಟ್ಟು ಭಾವನೆ ಬೆಳಸಲು ಸಹ ಸಾಮೂಹಿಕ ವಿವಾಹ ಪೂರಕವಾಗಿವೆ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಗದೀಶ ಗದ್ದಿ, ಪ್ರಮುಖರಾದ ಜಿಲ್ಲಾ ಕೆಡಿಪಿ ಸದಸ್ಯ ನಾಗಪ್ಪ ಹುಗ್ಗಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ದಪ್ಪ ನೀರ್ಲೂಟಿ, ಶರತ್ ನಾಯಕ, ಮೌನೇಶ ದಢೇಸೂಗೂರು ಮಾತನಾಡಿದರು. ವಿವಿಧ ಮಠಾಧೀಶರು ನೂತನ ವಧುವರರಿಗೆ ಆಶೀರ್ವದಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಅಮರೇಶ ನಾಯಕ, ಹನುಮಂತ ಜಾಡಿ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಗುರುಮೂರ್ತಿಗೌಡ, ಬೀರಪ್ಪ ಸಂಗಟಿ, ನಿರುಪಾದಿ ಅಂಗಡಿ, ಪ್ರಮುಖರಾದ ಅಶೋಕ ಜಾಡಿ, ಮೂಕಪ್ಪ, ಲಕ್ಷ್ಮಣ, ಅಚ್ಚಪ್ಪ ಹನುಮನಾಳ, ಕರಿಯಪ್ಪ ನಾಯಕ, ಹನುಮಂತಪ್ಪ, ಯಮನೂರ ಹೊಸಗೌಡ್ರ, ಕೆರಿಕೋಡಿ ಮಾಳಪ್ಪ, ಬಸವರಾಜ, ಬೀರಪ್ಪ, ನಿರುಪಾದಿ ಬಡಕುರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.