ADVERTISEMENT

ಪುರಾಣ ಮಂಗಲ, ಸಾಮೂಹಿ ವಿವಾಹ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 11:35 IST
Last Updated 19 ಏಪ್ರಿಲ್ 2019, 11:35 IST
 ಕನಕಗಿರಿ ಸಮೀಪದ ತಿಪ್ಪನಾಳ ಗ್ರಾಮದಲ್ಲಿ ಶುಕ್ರವಾರ ಸಾಮೂಹಿಕ ವಿವಾಹದಲ್ಲಿ ಎಂಟು ಜೋಡಿಗಳು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು
 ಕನಕಗಿರಿ ಸಮೀಪದ ತಿಪ್ಪನಾಳ ಗ್ರಾಮದಲ್ಲಿ ಶುಕ್ರವಾರ ಸಾಮೂಹಿಕ ವಿವಾಹದಲ್ಲಿ ಎಂಟು ಜೋಡಿಗಳು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು   

ಕನಕಗಿರಿ: ತಾಲ್ಲೂಕಿನ ತಿಪ್ಪನಾಳ ಗ್ರಾಮದ ಕಲಬುರಗಿ ಶ್ರೀ ಶರಣಬಸವೇಶ್ವರರ 27ನೇ ವರ್ಷದ ಪುರಾಣ ಮಂಗಲ, ಕುಂಭೋತ್ಸವ ಹಾಗೂ ಸಾಮೂಹಿಕ ವಿವಾಹಗಳು ಶುಕ್ರವಾರ ನಡೆದವು.

ವೇದಮೂರ್ತಿ ಶರಣಯ್ಯಸ್ವಾಮಿ ಅವರ ಸಾನಿಧ್ಯದಲ್ಲಿ ಒಟ್ಟು ಎಂಟು ಜೋಡಿಗಳು ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬೆಳಿಗ್ಗೆ ದೇವಸ್ಥಾನದಲ್ಲಿ ಕುಂಭಮೇಳ, ಮಾರುತೇಶ್ವರ ದೇವರಿಗೆ ಅಭಿಷೇಕ ಗಣಾರಾಧನೆ, ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆದವು. ಸಂಜೆ ಶರಣಬಸವೇಶ್ವರರ ಉಚ್ಛಾಯ ವಿಜೃಂಭಣೆಯಿಂದ ನಡೆಯಿತು. ಡೊಳ್ಳು, ಭಜನೆ, ವಿವಿಧ ವಾದ್ಯಗಳು ಗಮನ ಕಳೆ ತಂದವು. ಸೂಳೇಕಲ್, ಕನಕಗಿರಿ, ಬೆನಕನಾಳ, ಕಲಕೇರಿ ಸೇರಿದಂತೆ ಸುತ್ತಮುತ್ತಲ್ಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ADVERTISEMENT

ವೇದಮೂರ್ತಿ ಪ್ರಭುಸ್ವಾಮಿ ಶಾಸ್ತ್ರೀ, ಪುರಾಣ ಕಾರ್ಯಕ್ರಮ ನಡೆಸಿಕೊಟ್ಟರು. ವಿಶ್ವನಾಥ ಹಿರೇಮಠ, ಎಚ್. ಎಂ. ಶಂಕ್ರಯ್ಯಸ್ವಾಮಿ, ಗಣೇಶ್ವರ ಸ್ವಾಮಿ ಅವರು ಸಂಗೀತ, ತಬಲಾ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.