ADVERTISEMENT

ಕೊಪ್ಪಳ | ನೀರಿನ ಹರಿವು ಹೆಚ್ಚಳ: ಕೃಷ್ಣದೇವರಾಯ ಸಮಾಧಿ ಮುಳುಗಡೆ, ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 7:03 IST
Last Updated 13 ಜುಲೈ 2022, 7:03 IST
ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ಕೃಷ್ಣದೇವರಾಯ‌ನ ಸಮಾಧಿ ಮುಳುಗಡೆಯಾಗಿದೆ.
ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ಕೃಷ್ಣದೇವರಾಯ‌ನ ಸಮಾಧಿ ಮುಳುಗಡೆಯಾಗಿದೆ.    

ಗಂಗಾವತಿ (ಕೊಪ್ಪಳ): ತುಂಗಭದ್ರಾಜಲಾಶಯದಿಂದ ಬುಧವಾರ ಬೆಳಿಗ್ಗೆ ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಹರಿಬಿಡಲಾಗಿದ್ದು, ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ಕೃಷ್ಣದೇವರಾಯ‌ನ ಸಮಾಧಿ ಮುಳುಗಡೆಯಾಗಿದೆ. ನವವೃಂದಾವನಕ್ಕೆ ತೆರಳುವ ಸಂಪರ್ಕ ಮಾರ್ಗ ಕಡಿತಗೊಂಡಿದೆ.

ಸಾಣಾಪುರ ಗ್ರಾಮದ ಬಳಿ ನಿರ್ಮಾಣ ಮಾಡಲಾಗುತ್ತಿ‌ರುವ ವಿಜಯನಗರದ ಕಾಲುವೆ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದ್ದರಿಂದ ಕಾಲುವೆ ನೀರು ನದಿಗೆ ಹರಿಸಲು ಜಾಕ್ ವೆಲ್ ಡೋರ್ ಕಿತ್ತು ಹಾಕಲಾಗಿದೆ.

ಈಗಾಗಲೇ ಜಿಲ್ಲಾಡಳಿತ ಮತ್ತು ಗಂಗಾವತಿ ತಾಲ್ಲೂಕು ಆಡಳಿತ ಸಾರ್ವಜನಿಕರು ನದಿಪಾತ್ರಕ್ಕೆ ತೆರಳದಂತೆ ಗ್ರಾಮ ಪಂಚಾಯ್ತಿ ಮೂಲಕ ಗ್ರಾಮಗಳಲ್ಲಿ ಡಂಗೂರದ ಮೂಲಕ ಜಾಗೃತಿ‌ ಮೂಡಿಸುತ್ತಿದೆ. ಸಾಮಾಜಿಕ ತಾಣಗಳ ಮೂಲಕ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ.

ADVERTISEMENT

ನೀರಿನ ಹರಿವು ಹೆಚ್ಚಾಗಿರುವ ಕಾರಣ ಗಂಗಾವತಿ-ಕಂಪ್ಲಿ ನಡುವಿನ ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆಯಿದೆ.
ಆದ್ದರಿಂದ ವಾಹನಗಳನ್ನು ಕಡೆಬಾಗಿಲು-ಬುಕ್ಕಸಾಗರ ಸೇತುವೆ ಮಾರ್ಗವಾಗಿ ತೆರಳುವಂತೆ ಕೊಪ್ಳಳ ಎ.ಸಿ ಬಸವಣ್ಣೆಪ್ಪ ಕಲಶೆಟ್ಟಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.