ADVERTISEMENT

ಹಂಚಿನಾಳ : ಪೈಪ್‌ಲೈನ್‌ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 10:53 IST
Last Updated 19 ಏಪ್ರಿಲ್ 2021, 10:53 IST
ತಾವರಗೇರಾ ಸಮೀಪದ ಹಂಚಿನಾಳ ಗ್ರಾಮದಲ್ಲಿ ಪೈಪ್‌ಲೈನ್‌ ಕಾಮಗಾರಿಗೆ ಸಂಸದ ಸಂಗಣ್ಣ ಕರಡಿ ಭೂಮಿಪೂಜೆ ನೆರವೇರಿಸಿದರು
ತಾವರಗೇರಾ ಸಮೀಪದ ಹಂಚಿನಾಳ ಗ್ರಾಮದಲ್ಲಿ ಪೈಪ್‌ಲೈನ್‌ ಕಾಮಗಾರಿಗೆ ಸಂಸದ ಸಂಗಣ್ಣ ಕರಡಿ ಭೂಮಿಪೂಜೆ ನೆರವೇರಿಸಿದರು   

ಹಂಚಿನಾಳ (ತಾವರಗೇರಾ): ‘ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತಪ್ಪಿಸಲು ‘ಜಲ ಜೀವನ ಮಿಷನ್‌’ ಯೋಜನೆ ಜಾರಿ ಮಾಡಲಾಗುತ್ತಿದೆ’ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಸಮೀಪದ ಹಂಚಿನಾಳ ಗ್ರಾಮದಲ್ಲಿ ಪೈಪ್‌ಲೈನ್‌ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಈ ಯೋಜನೆ ಜಾರಿ ಮಾಡಿ ಮನೆ ಮನೆಗೆ ಶುದ್ಧ ಕುಡಿಯುವ ನೀರೊದಗಿಸುವ ಕೆಲಸ ಮಾಡಲಾಗುವುದು ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಹೇಶ ಮಾತನಾಡಿ,‘ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ಆಡಳಿತವನ್ನು ಜನ ಮೆಚ್ಚಿದ್ದಾರೆ’ ಎಂದು ಹೇಳಿದರು.

‘ರೈತಪರ ಯೋಜನೆಗಳನ್ನು ಜಾರಿಗೆ ತಂದು, ಗ್ರಾಮೀಣಾಭಿವೃದ್ಧಿ ಮಾಡುತ್ತಿದ್ದಾರೆ’ ಎಂದರು .

ವೆಂಕಟೇಶ್ವರ ದೇವಸ್ಥಾನದ ಸಮುದಾಯ ಭವನದ ನವೀಕರಣ ಕಾಮಗಾರಿಗೆ ಅನುದಾನ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಮುಖಂಡ ಲಿಂಗರಾಜ ಸಾಹುಕಾರ ಮತ್ತು ಗ್ರಾಮಸ್ಥರು ಮನವಿ ಸಲ್ಲಿಸಿದರು.

ಗ್ರಾ.ಪಂ. ಅಧ್ಯಕ್ಷೆ ನಿರ್ಮಲಾ ಅರಳಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸೋಮನಾಥ ನಿರೂಪಿಸಿ, ವಂದಿಸಿದರು.

ವಿಜಯಕುಮಾರ ನಾಯಕ, ಭೀಮಣ್ಣ ಅಗಸಿಮುಂದಿನ, ತಾ.ಪಂ. ಸದಸ್ಯ ಭೀಮಣ್ಣ ತಲೆಖಾನ, ಕುಷ್ಟಗಿ ಪುರಸಭೆ ಅಧ್ಯಕ್ಷ ಗಂಗಾಧರ ಹಿರೇಮಠ, ಸಂಗನಗೌಡ ಜೈನರ್, ತಾ.ಪಂ. ಸದಸ್ಯ ಮಹಾಂತೇಶ ಬದಾಮಿ, ಚಂದ್ರು ವಡಗೇರಿ, ಗ್ರಾ.ಪಂ ಉಪಾಧ್ಯಕ್ಷ ದೇವಪ್ಪ ಸುಬೇದಾರ, ಎಂಜಿನಿಯರ್ ಶ್ಯಾಮಣ್ಣ ನಾರಿನಾಳ, ಎಪಿಎಂಸಿ ಅಧ್ಯಕ್ಷ ಶರಣೆಗೌಡ ಲಿಂಗದಹಳ್ಳಿ, ಗ್ರಾ.ಪಂ. ಸದಸ್ಯರಾದ ಅಡಿವೆಪ್ಪ ಮೆಳ್ಳಿ, ರೇಣುಕಮ್ಮ, ಅನ್ನಪೂರ್ಣ ಗುಡಿಹಿಂದಿನ, ಎಂಜಿನಿಯರ್ ಚೈತ್ರಾ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಬುಜಾ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.