ADVERTISEMENT

ಯರಡೋಣ: ಮುರಡ ಬಸವೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 2:00 IST
Last Updated 29 ಮಾರ್ಚ್ 2021, 2:00 IST
ಕಾರಟಗಿ ತಾಲ್ಲೂಕಿನ ಯರಡೋಣಾ ಗ್ರಾಮದಲ್ಲಿ ಮುರಡ ಬಸವೇಶ್ವರರ ರಥೋತ್ಸವ ಜರುಗಿತು
ಕಾರಟಗಿ ತಾಲ್ಲೂಕಿನ ಯರಡೋಣಾ ಗ್ರಾಮದಲ್ಲಿ ಮುರಡ ಬಸವೇಶ್ವರರ ರಥೋತ್ಸವ ಜರುಗಿತು   

ಯರಡೋಣ (ಕಾರಟಗಿ): ತಾಲ್ಲೂಕಿನ ಯರಡೋಣಾ ಗ್ರಾಮದಲ್ಲಿ ಭಾನುವಾರ ಮುರಡ ಬಸವೇಶ್ವರರ ರಥೋತ್ಸವ ಸಂಭ್ರಮದಿಂದ
ನಡೆಯಿತು.

ಯರಡೋಣಾ, ಕಿಂದಿಕ್ಯಾಂಪ್‌, ಈಳಿಗನೂರು, ಸಿದ್ದಾಪುರ, ಬೂದುಗುಂಪಾ, ತಿಮ್ಮಾಪುರ ಹಾಗೂ ಹಾಲಸಮುದ್ರ ಗ್ರಾಮದ ಭಕ್ತರು ದೇವಸ್ಥಾನದ ಎದುರು ನಿಲ್ಲಿಸಲಾಗಿದ್ದ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ವಿವಿಧ ಹೂವುಗಳಿಂದ ಅಲಂಕಾರ ಮಾಡಿದರು.

ಅರ್ಚಕರು ದೇವಸ್ಥಾನದಿಂದ ಉತ್ಸವ ಮೂರ್ತಿ ತಂದು ರಥದಲ್ಲಿ ಇರಿಸಿ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ADVERTISEMENT

ಡೊಳ್ಳು, ವಾದ್ಯಮೇಳ, ಭಜನೆ ಗೀತೆಗಳ ಹಾಗೂ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ಪಾದಗಟ್ಟೆವರೆಗೆ ತೆರಳಿದ ರಥ ದೇವಸ್ಥಾನದ ಆವರಣಕ್ಕೆ ಬಂದು ನಿಂತಿತು.

ಭಕ್ತರು, ಹೂವು, ಹಣ್ಣು ಮತ್ತು ಉತ್ತತ್ತಿಗಳನ್ನು ಎಸೆದು ಧನ್ಯತಾಭಾವ ಮೆರೆದರು.

ದೇವಾಲಯದಲ್ಲಿ ಬೆಳಿಗ್ಗೆಯಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.