ADVERTISEMENT

‘ಅಲೆಮಾರಿ ಸಮುದಾಯಗಳ ಕಡೆ ಗಮನಹರಿಸಿ’

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 2:54 IST
Last Updated 5 ಏಪ್ರಿಲ್ 2021, 2:54 IST
ತಾವರಗೇರಾ ಸಮೀಪದ ಗದ್ದೇರಹಟ್ಟಿ ಗ್ರಾಮಕ್ಕೆ ಈಚೆಗೆ ಕರ್ನಾಟಕ ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ರವೀಂದ್ರಶೆಟ್ಟಿ ಭೇಟಿ ನೀಡಿದರು
ತಾವರಗೇರಾ ಸಮೀಪದ ಗದ್ದೇರಹಟ್ಟಿ ಗ್ರಾಮಕ್ಕೆ ಈಚೆಗೆ ಕರ್ನಾಟಕ ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ರವೀಂದ್ರಶೆಟ್ಟಿ ಭೇಟಿ ನೀಡಿದರು   

ಗದ್ದೇರಹಟ್ಟಿ (ತಾವರಗೇರಾ): ‘ತಳ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಗಲಿರುಳು ಶ್ರಮಿಸುತ್ತೇನೆ’ ಎಂದು ಕರ್ನಾಟಕ ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರಶೆಟ್ಟಿ ಹೇಳಿದರು.

ಸಮೀಪದ ಗದ್ದೇರಹಟ್ಟಿ ಗ್ರಾಮಕ್ಕೆ ಈಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೂಡ ಸಮುದಾಯಗಳ ಕಡೆ ಗಮನ ಹರಿಸಬೇಕು’ ಎಂದು ಹೇಳಿದರು.

ADVERTISEMENT

‘ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಹೋದ ಕಡೆ ಎಲ್ಲ ಮನವಿಗಳ ಮಹಾಪೂರ ಹರಿದು ಬರುತ್ತಿದೆ. ಇವೆಲ್ಲವುಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಕಾಂತ ವಡಗೇರಿ, ಮಂಜುನಾಥ ಜೂಲಕುಂಟಿ, ಯುವ ಮುಖಂಡರಾದ ಶಂಭನಗೌಡ ಪೊಲೀಸ್ ಪಾಟೀಲ, ಪ.ಪಂ. ಸದಸ್ಯರಾದ ಚನ್ನಪ್ಪ ಸಜ್ಜನ್, ವೀರೇಶ ಭೋವಿ, ಲಕ್ಷ್ಮಣ ಮುಖಿಯಾಜಿ, ಮಹೇಶ ಗೊಲ್ಲರ ಹಾಗೂ ಉಮೇಶ ಯಾದವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.