ಮುನಿರಾಬಾದ್: ಇಲ್ಲಿನ ತುಂಗಭದ್ರಾ ಜಲಾಶಯದಿಂದ ನದಿ ಸತತವಾಗಿ ನೀರು ಬಿಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಜನ ಹೆದ್ದಾರಿಯಲ್ಲಿ ನಿಂತು ಸೆಲ್ಫಿ, ಪೋಟೊ ತೆಗೆದುಕೊಳ್ಳುತ್ತಿದ್ದಾರೆ.
ಹೊಸಪೇಟೆ-ಹುನಗುಂದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಜಲಾಶಯದ ಮುಂಭಾಗದಲ್ಲಿ ಹಾದುಹೋಗಿದೆ. ನೀರು ಬಿಡುಗಡೆ ಸಂದರ್ಭದಲ್ಲಿ ಹೆದ್ದಾರಿಯಿಂದ ಜಲಾಶಯದ ನೋಟ ಸುಂದರವಾಗಿ ಕಂಡುಬರುತ್ತದೆ.
ದ್ವಿಚಕ್ರ ವಾಹನ ಸವಾರರು ಸೇರಿದಂತೆ ಕೆಲವು ಲಘು ವಾಹನಗಳನ್ನು ಹೆದ್ದಾರಿಯಲ್ಲಿ ನಿಲ್ಲಿಸಿ ಅಪಾಯವನ್ನು ಲೆಕ್ಕಿಸದೆ ಜನ ಪೋಟೊ ತೆಗೆದುಕೊಳ್ಳುವುದು ಕಂಡುಬರುತ್ತಿದೆ.
ಹೆದ್ದಾರಿಯಲ್ಲಿ ಸರಕು ಸಾಗಣೆ ಲಾರಿ ಮತ್ತು ಟಿಪ್ಪರ್‌ಗಳು ಅನಿಯಮಿತ ವೇಗದಲ್ಲಿ ನಿರಂತರವಾಗಿ ಚಲಿಸುತ್ತಿರುತ್ತವೆ. ಪೋಟೊ ತೆಗೆದುಕೊಳ್ಳುವ ಸಮಯದಲ್ಲಿ ಅಪಘಾತವಾಗುವ ಸಂಭವವಿದೆ. ಜಿಲ್ಲಾ ಆಡಳಿತ ಗಮನಹರಿಸಿ ಪೊಲೀಸ್ ಅಥವಾ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜನೆ ಮಾಡಿದರೆ ಅಪಾಯ ಮತ್ತು ಸಂಚಾರದಟ್ಟಣೆ ತಡೆಯಬಹುದಾಗಿದೆ ಎಂಬುವುದು ಹಲವರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.