
ಯಲಬುರ್ಗಾ: ‘ಪ್ರಚಾರ ಮತ್ತು ಮಾಹಿತಿಯ ಕೊರತೆಯಿಂದ ಅಂಚೆ ಇಲಾಖೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಅನೇಕ ಯೋಜನೆಗಳ ಪ್ರಯೋಜನಗಳನ್ನು ಪಡೆಯುವಲ್ಲಿ ಸಾರ್ವಜನಿಕರು ವಂಚಿತರಾಗುತ್ತಿದ್ದಾರೆ’ ಎಂದು ಕುಷ್ಟಗಿ ವಿಭಾಗದ ಅಂಚೆ ನಿರೀಕ್ಷಕ ಗೋಪಿ ಸಾಗರ ಹೇಳಿದರು.
ತಾಲ್ಲೂಕಿನ ತರಲಕಟ್ಟಿ ಗ್ರಾಮದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಜನ ಸಂಪರ್ಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಗಳ ಜೊತೆಗೆ ವಿವಿಧ ವಿಮಾ ಸೌಲಭ್ಯಗಳನ್ನು ಕಲ್ಪಿಸಿದೆ. ಇವುಗಳ ಜೊತೆಗೆ ಮಧ್ಯಮ ವರ್ಗದ ಜನರಿಗೂ ಅನುಕೂಲವಾಗುವ ಅನೇಕ ಯೋಜನೆಗಳು ಜಾರಿಯಲ್ಲಿದ್ದು, ಅಂಚೆ ಕಚೇರಿಗೆ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದು ಯೋಜನೆಗಳ ಸದ್ಬಳಕೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಅಂಚೆ ಇಲಾಖೆಯ ಸಹಾಯಕ ಮೇಲ್ವಿಚಾರಕ ರಾಘವೇಂದ್ರ, ಬಂಡಿ ಶಾಖೆಯ ಅಧಿಕಾರಿ ದ್ವಾರಕೇಶ ಹಿರೇಮಠ ಬಸವರಾಜ ವಲ್ಮಕೊಂಡಿ, ತೋಟಪ್ಪ ಬೇವೂರು, ಕರಿಯಪ್ಪ ಶಿಲ್ಪಿ, ಶಂಕ್ರಪ್ಪ ಮೇಟಿ, ಹನುಮಂತಪ್ಪ ಗುರಿಕಾರ, ಶಿವನಾಗಪ್ಪ ಮೇಟಿ, ಶಿವಶರಣಪ್ಪ ಮೇಟಿ, ಬಸವರಾಜ ನೇಲಜೇರಿ ಸೇರಿ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.