ADVERTISEMENT

ಕರವೀರಭದ್ರೇಶ್ವರ ಪುರಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 4:36 IST
Last Updated 21 ಡಿಸೆಂಬರ್ 2021, 4:36 IST
ಯಲಬುರ್ಗಾ ತಾಲ್ಲೂಕು ಕರಮುಡಿ ಗ್ರಾಮದ ಕರವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಕಲ್ಲಯ್ಯಜ್ಜನವರು ಮಾತನಾಡಿದರು
ಯಲಬುರ್ಗಾ ತಾಲ್ಲೂಕು ಕರಮುಡಿ ಗ್ರಾಮದ ಕರವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಕಲ್ಲಯ್ಯಜ್ಜನವರು ಮಾತನಾಡಿದರು   

ಯಲಬುರ್ಗಾ: ತಾಲ್ಲೂಕಿನ ಕರಮುಡಿ ಗ್ರಾಮದ ಕರವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಕರವೀರಭದ್ರೇಶ್ವರ ಪುರಾಣ ಪ್ರವಚನಕ್ಕೆ ಚಾಲನೆ ನೀಡಲಾಗಿದೆ.

ಮೊದಲ ದಿನದ ಪ್ರವಚನದ ಸಾನ್ನಿಧ್ಯ ವಹಿಸಿ ಮಾತನಾಡಿದ ಗದಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಕಾರಿ ಕಲ್ಲಯ್ಯಜ್ಜನ ವರು,‘ನೆಮ್ಮದಿಯ ಬದುಕಿಗೆ ಹಾಗೂ ಸಾರ್ಥಕ ಜೀವನಕ್ಕೆ ಆಧ್ಯಾತ್ಮ ಅಗತ್ಯ. ಸತ್ಕಾರ್ಯ ಮತ್ತು ಉತ್ತಮ ವಿಚಾರಗಳ ಕುರಿತು ನಡೆಯುವ ಕಾರ್ಯಕ್ರಮಗಳು ಸಾಮಾಜಿಕ ಕಳಕಳಿ ಎತ್ತಿ ತೋರಿಸುತ್ತವೆ. ಸುಧಾರಣೆಗೆ ಇಂಥ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು’ ಎಂದರು.

ಪುರಾಣ ಪ್ರವಚನಕಾರರಾದ ಹುಚ್ಚಯ್ಯ ಗವಾಯಿ, ತಬಲಾವಾದಕ ವೀರಭದ್ರಯ್ಯ ಕೆಂಬಾವಿಮಠ ಹಾಗೂ ಇತರರು ಸಂಗೀತ ಹಾಗೂ ಪುರಾಣ ಪ್ರವಚನ ಮಾಡಿದರು.

ADVERTISEMENT

ಗೌಡಪ್ಪ ಬಲಕುಂದಿ, ಗಂಗಪ್ಪ ಹವಳಿ,ಶರಣಪ್ಪಗೌಡ ಪಾಟೀಲ, ಶಾಮೀದ್‍ಸಾಬ ಮುಲ್ಲಾ, ವೀರಣ್ಣ ಮಾನಶೆಟ್ಟಿ, ಶರಣಪ್ಪ ಕೆಂಚರಡ್ಡಿ, ಹುಚ್ಚೀರಪ್ಪ ರಾಂಪೂರ, ಡಾ. ಕಾಶಯ್ಯ ನಂದಿಕೊಲಮಠ, ವೀರಣ್ಣ ನಿಂಗೋಜಿ, ಶರಣಪ್ಪ, ಉಮೇಶ ಕುಕನೂರ, ವೀರಪ್ಪ ಪಟ್ಟೇದ ಹಾಗೂ ಸಂಗಯ್ಯ ಪೂಜಾರ ಸೇರಿ ಈ ವೇಳೆ ಹಲವರು ಇದ್ದರು.

ವಿರೂಪಾಕ್ಷಪ್ಪ ಉಳ್ಳಾಗಡ್ದಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.