ADVERTISEMENT

ಭೂ ಸವಕಳಿ ತಡೆಗೆ ಗಿಡಗಳ ನೆಡಿ: ಸಹಾಯಕ ಕೃಷಿ ನಿರ್ದೆಶಕ ಜೀವನಸಾಬ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 14:10 IST
Last Updated 2 ಜೂನ್ 2024, 14:10 IST
ಅಳವಂಡಿ ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಕೃಷಿ ಇಲಾಖೆಯ ವತಿಯಿಂದ ರಿವಾರ್ಡ ಜಲಾನಯನ ಅಭಿವೃದ್ದಿ ಯೋಜನೆಯಡಿ ರೈತರಿಗೆ ವಿವಿಧ ಸಸಿಗಳನ್ನು ವಿತರಣೆ ಮಾಡಲಾಯಿತು.
ಅಳವಂಡಿ ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಕೃಷಿ ಇಲಾಖೆಯ ವತಿಯಿಂದ ರಿವಾರ್ಡ ಜಲಾನಯನ ಅಭಿವೃದ್ದಿ ಯೋಜನೆಯಡಿ ರೈತರಿಗೆ ವಿವಿಧ ಸಸಿಗಳನ್ನು ವಿತರಣೆ ಮಾಡಲಾಯಿತು.   

ಅಳವಂಡಿ: ರೈತರು ಭೂ ಸವಕಳಿ ತಡೆಯಲು ಗಿಡಗಳನ್ನು ನೆಡಬೇಕು ಹಾಗೂ ಜಮೀನಿನ ಮಣ್ಣು ಹಳ್ಳ ಕೊಳ್ಳ ಸೇರದಂತೆ ತಡೆಯಬೇಕು. ಫಲವತ್ತಾದ ಹಾಗೂ ಪೋಷಕಾಂಶಗಳನ್ನು ಹೊಂದಿದ ಭೂಮಿಯಿಂದ ಮಾತ್ರ ಸಮೃದ್ದ ಬೆಳೆ ಬೆಳೆಯಬಹುದು. ಕಾರಣ ರೈತರು ಭೂಸವಕಳಿ ತಡೆಯಲು ಬದು ನಿರ್ಮಾಣದ ಜೊತೆಗೆ ಗಿಡಗಳನ್ನು ನೆಡಿ ಎಂದು ಸಹಾಯಕ ಕೃಷಿ ನಿರ್ದೆಶಕ ಜೀವನಸಾಬ ಕುಷ್ಟಗಿ ಹೇಳಿದರು.

ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಜಿಪಂ ಕೊಪ್ಪಳ, ಜಲಾನಯನ ಅಭಿವೃದ್ದಿ ಇಲಾಖೆ, ಕೃಷಿ ಇಲಾಖೆ, ವಿಶ್ವ ಬ್ಯಾಂಕ ನೆರವಿನ ರಿವಾರ್ಡ ಜಲಾನಯನ ಅಭಿವೃದ್ದಿ ಯೋಜನೆಯಡಿ ರೈತರಿಗೆ ವಿವಿಧ ಸಸಿಗಳನ್ನು ವಿತರಣೆ ಮಾಡಿ ಇತ್ತೀಚೆಗೆ ಮಾತನಾಡಿದರು.

ಕೃಷಿಯ ಸುಸ್ಥಿರತೆಗಾಗಿ ನವೀನ ತಂತ್ರಜ್ಞಾನದ ಮೂಲಕ ಜಲಾನಯನ ಪ್ರದೇಶವನ್ನು ಪುನಶ್ಚೇತನಗೊಳಿಸುವದು ಹಾಗೂ ಮಣ್ಣಿನ ವಿಧ, ಮಣ್ಣಿನ ರಚನೆ, ಭೂ ಸವಕಳಿ ತಡೆಯುವದು , ಜಮೀನುಗಳಲ್ಲಿ ಬದು ನಿರ್ಮಾಣ, ಅಚಗಟ್ಟೆ ನಿರ್ಮಾಣ ಮಾಡುವದು, ಜಮೀನು ಸಮತಟ್ಟು ಆಗಿ ನೀರು ನಿಲ್ಲವಂತೆ ಮಾಡುವದು ರಿವಾರ್ಡ ಯೋಜನೆಯ ಮೂಲ ಉದ್ದೇಶವಾಗಿದೆ, ಜೊತೆಗೆ ಜಲಾನಯನ ವ್ಯಾಪ್ತಿಯ ರೈತರು ಬದುಗಳಲ್ಲಿ ಗಿಡಗಳನ್ನು ನೆಡಲು ಸಹ ಅನೂಕೂಲ ಮಾಡಿಕೊಡಲಾಗುತ್ತಿದೆ. ಗಿಡ ನೆಡುವದರಿಂದ ಆರ್ಥಿಕ ಲಾಭ ಕೂಡ ಆಗಲಿದೆ ಎಂದರು.

ADVERTISEMENT

ಕೃಷಿ ಅಧಿಕಾರಿಗಳಾದ ಪ್ರತಾಪಗೌಡ ನಂದನಗೌಡ, ಬಿ.ಎಮ್.ಗೊಬ್ಬರಗುಂಪಿ, ಸಹಾಯಕ ಕೃಷಿ ಅಧಿಕಾರಿಗಳಾದ ವೀರೇಶ ಪಟ್ಟೇದ, ಮಾರುತಿ ಹಾಗೂ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.