ADVERTISEMENT

ಕಪ್ಪು ಬಟ್ಟೆ ಕಟ್ಟಿಕೊಂಡು ಸೇವೆ

ಅಂಗವಿಕಲ ಸರ್ಕಾರಿ ‌ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 2:15 IST
Last Updated 4 ಡಿಸೆಂಬರ್ 2021, 2:15 IST
ಅಂಗವಿಕಲರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಕೊಪ್ಪಳದ ಸಿಪಿಎಸ್‌ ಶಾಲೆಯಲ್ಲಿ ಅಂಗವಿಕಲ ಶಿಕ್ಷಕರು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸಿದರು
ಅಂಗವಿಕಲರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಕೊಪ್ಪಳದ ಸಿಪಿಎಸ್‌ ಶಾಲೆಯಲ್ಲಿ ಅಂಗವಿಕಲ ಶಿಕ್ಷಕರು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸಿದರು   

ಕೊಪ್ಪಳ: ಅಂಗವಿಕಲ ಸರ್ಕಾರಿ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಟ್ಟುಬಟ್ಟೆಕಟ್ಟಿಕೊಂಡು ಶಿಕ್ಷಕರು ಸೇವೆಗೆ ಹಾಜರಿದ್ದರು.

ವಿಶ್ವಅಂಗವಿಕಲದಿನಾಚರಣೆ ಅಂಗವಾಗಿ ನೌಕರರ ಸಂಘದ ವತಿಯಿಂದ ಕರಾಳ ದಿನಾಚರಣೆ ಹಾಗೂ ಕೈಗೆ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು ಕರ್ತವ್ಯ ನಿರ್ವಹಿಸಿ ಮಾತನಾಡಿದ ಸಂಘದ ರಾಜ್ಯ ಅಧ್ಯಕ್ಷ ಬೀರಪ್ಪ ಅಂಡಗಿ, ರಾಜ್ಯ ಸರ್ಕಾರ ನೌಕರರ ಬೇಡಿಕೆಗಳಾದ ಸುಪ್ರೀಂಕೋರ್ಟ್‌ ಆದೇಶದಂತೆ ಅವರ ಸೇವಾ ಜೇಷ್ಠತೆ ಅನುಸರಿಸಿ ಶೇ 3 ರಷ್ಟು ಬಡ್ತಿಯಲ್ಲಿ ಮೀಸಲಾತಿ ನೀಡುವಂತೆ ದೇಶದ ಎಲ್ಲ ರಾಜ್ಯಗಳಿಗೆ ನಿರ್ದೇಶನ ಮಾಡಿ ಎರಡು ವರ್ಷ ಕಳೆದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯ ಕಾರ್ಯದರ್ಶಿ ಸೇರಿದಂತೆ ಅನೇಕ ಸಚಿವರಿಗೆ ಮನವಿ ಕೊಟ್ಟರೂ ಬಡ್ತಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ಆಗಿರುವುದಿಲ್ಲ. ಈಗಾಗಲೇ ಅನೇಕ ಇಲಾಖೆಗಳಲ್ಲಿ ಬಡ್ತಿ ನೀಡಿದ್ದಾರೆ ಹಾಗೂ ಇನ್ನೂ ಅನೇಕ ಇಲಾಖೆಗಳಲ್ಲಿ ಬಡ್ತಿ ನೀಡುವ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದಾರೆ. ಆದೇಶ ಜಾರಿಯಾಗದ ಹಿನ್ನೆಲೆಯಲ್ಲಿಅಂಗವಿಕಲ ನೌಕರರು ಬಡ್ತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದರು.

ADVERTISEMENT

2016ರ ಅಂಗವಿಕಲರ ಕಾಯ್ದೆಯನ್ನು ಜಾರಿಗೆ ತಂದರೂ ಕೂಡಾ ಅದರ ಸರಿಯಾದ ಅನುಷ್ಟಾನ ಮಾತ್ರ ಆಗಿರುವುದಿಲ್ಲ. ಯಾವ ವರ್ಗಾವಣೆಯಲ್ಲಿ ಇಲ್ಲದ ನಿಯಮಗಳನ್ನು ಶಿಕ್ಷಕರ ವರ್ಗಾವಣೆಯಲ್ಲಿ ಅಳವಡಿಸಿಕೇಂದ್ರ ಸರ್ಕಾರ ದೇಶದ ಎಲ್ಲ ಅಂಗವಿಕಲರಿಗೆ ಒಂದೇ ತರಹನಾದ ಗುರುತಿನ ಕಾರ್ಡ್ ಇರಲಿ ಎಂಬ ಉದ್ದೇಶದಿಂದ ವಿಕಲಚೇತನರ ವಿಶಿಷ್ಟ ಗುರುತಿನ(ಯು.ಡಿ.ಐ.ಡಿ) ಕಾರ್ಡ್ ಜಾರಿಗೆ ತಂದಿದ್ದರೂ ಜಿಲ್ಲಾ ಆಸ್ಪತ್ರೆಗಳಿಂದ ಪದೇ ಪದೇ ಅಂಗವಿಕಲತೆಗೆ ಸಂಬಂಧಿಸಿದಂತೆ ತ್ರಿ ಸದಸ್ಯರ ವೈದ್ಯಕೀಯ ಪ್ರಮಾಣ ಪತ್ರವನ್ನು ತರಲು ಸೂಚಿಸುವ ಪದ್ದತಿಯನ್ನು ಕೈ ಬೀಡಬೇಕು ಎಂದರು.

ಸಂಘದ ರಾಜ್ಯ ತಾಂತ್ರಿಕ ಗೌರವ ಸಲಹೆಗಾರರಾದ ಕಾಶಿನಾಥ ಶಿರಿಗೇರಿ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಶಂಕ್ರಮ್ಮ ಶೆಟ್ಟರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.