ಕನಕಗಿರಿ: ಕೋಲ್ಕತ್ತದ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಇಲ್ಲಿನ ವೈದ್ಯಕೀಯ ಸಂಘದ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು. ಕಲ್ಮಠದಿಂದ ಆರಂಭವಾದ ಪ್ರತಿಭಟನೆ ರಾಜಬೀದಿ ಮೂಲಕ ತಹಶೀಲ್ದಾರ್ ಕಚೇರಿವರೆಗೆ ನಡೆಯಿತು.
ಹಿರಿಯ ವೈದ್ಯ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಡಾ. ಅರವಟಗಿಮಠ ಮಾತನಾಡಿ, ‘ವೈದ್ಯರು ಹಗಲಿರುಳು ಸಾರ್ವಜನಿಕರ ಜೀವ ಉಳಿಸುವ ಕೆಲಸ ಮಾಡಿದರೆ, ದುಷ್ಕರ್ಮಿಗಳು ವೈದ್ಯರ ಜೀವ ತೆಗೆಯುತ್ತಾರೆ. ಇಂತಹ ಘಟನೆಯನ್ನು ಪ್ರತಿಯೊಬ್ಬರು ಖಂಡಿಸಬೇಕು’ ಎಂದು ತಿಳಿಸಿದರು.
ಡಾ.ಸಿದ್ರಾಮೇಶ ಮಾತನಾಡಿ, ‘ವೈದ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಬಲತ್ಕಾರ ಮಾಡಿ ಕೊಲೆ ಮಾಡಿದ ದುಷ್ಕರ್ಮಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಗ್ರೇಡ್-2 ತಹಶೀಲ್ದಾರ್ ವಿರೂಪಾಕ್ಷಪ್ಪ ಅವರಿಗೆ ಮನವಿ ಸಲ್ಲಿಸಿದರು. ವೈದ್ಯರಾದ ಡಾ. ಐ.ಎಚ್. ಕಿನ್ನಾಳ,
ಡಾ.ನಾಗರಾಜ ಹಂಚಿನಾಳ, ಡಾ.ರಂಗಾರೆಡ್ಡಿ ಮಾದಿನಾಳ, ಡಾ.ಬಸವರಾಜ ಹಿರೇಮಠ, ಶಾಹಬುದ್ದೀನ್ ದೋಟಿಹಾಳ, ಡಾ.ಮಲ್ಲಿಕಾರ್ಜುನ ಬೇವಿನಮರದ, ಡಾ. ಶರಣಬಸವ ಪಾಟೀಲ, ಪಟ್ಟಣ ಪಂಚಾಯಿತಿ ಸದಸ್ಯರಾದ ಅನಿಲಕುಮಾರ ಬಿಜ್ಜಳ, ಸಿದ್ದಾರ್ಥ ಕಲ್ಲಬಾಗಿಲಮಠ, ಮೆಡಿಕಲ್ ಅಸೋಸಿಯೇಶನ್ ಸದಸ್ಯರಾದ ಮಂಗಳೇಶ ಈಳಿಗೇರ, ಪಾಂಡುರಂಗ ಜನಾದ್ರಿ, ವಜೀರ ಕಿನ್ನಾಳ, ವಿನೋದಕುಮಾರ ಕಂದಗಲ್ಲ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.