ADVERTISEMENT

ಅಕಾಲಿಕ ಮಳೆ: ನೆಲಕ್ಕೊರಗಿದ ಬೆಳೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 10:49 IST
Last Updated 8 ಏಪ್ರಿಲ್ 2020, 10:49 IST
ಕಾರಟಗಿ ತಾಲ್ಲೂಕಿನ ಹುಳ್ಕಿಹಾಳ ಗ್ರಾಮದಲ್ಲಿ ಮಂಗಳವಾರ ಸುರಿದ ಮಳೆಗೆ ಭತ್ತ ನೆಲಕ್ಕೊರಗಿರುವುದು
ಕಾರಟಗಿ ತಾಲ್ಲೂಕಿನ ಹುಳ್ಕಿಹಾಳ ಗ್ರಾಮದಲ್ಲಿ ಮಂಗಳವಾರ ಸುರಿದ ಮಳೆಗೆ ಭತ್ತ ನೆಲಕ್ಕೊರಗಿರುವುದು   

ಕಾರಟಗಿ: ಪಟ್ಟಣದಲ್ಲಿ ಮಧ್ಯಾಹ್ನದ ಬಳಿಕ ಅರ್ಧ ಗಂಟೆಯವರೆಗೂ ಗುಡುಗು ಸಹಿತ ಮಳೆ ಸುರಿಯಿತು.

ಮಳೆ, ತಣ್ಣನೆಯ ಗಾಳಿಯಿಂದ ಬಿಸಿಲಿನ ಬೇಗೆಯಲ್ಲಿ ಬಳಲಿದ್ದ ಜನರಿಗೆ ತಂಪಾದ ವಾತಾವರಣ ಸೃಷ್ಟಿಸಿತ್ತು. ಸಂಜೆಯೂ ಗುಡುಗು ಸದ್ದು ಕೇಳಿಬರುತ್ತಿತ್ತು.

ತಾಲ್ಲೂಕಿನ ವಿವಿಧೆಡೆ ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲಕ್ಕೊರಗಿ, ರೈತರಲ್ಲಿ ಆತಂಕ ಹೆಚ್ಚಿಸಿದೆ.

ADVERTISEMENT

ತಾಲ್ಲೂಕಿನ ಹುಳ್ಕಿಹಾಳ, ಬರಗೂರು, ಕೊಟ್ನೆಕಲ್, ಸಿದ್ದಾಪುರ, ಮರ್ಲಾನಹಳ್ಳಿ, ಯರಡೋಣ, ಬೂದಗುಂಪಾ, ಪನ್ನಾಪುರ ಸಹಿತ ವಿವಿಧೆಡೆ ಏಕಾಏಕಿ ಬಿರುಗಾಳಿ, ಗುಡುಗು ಸಹಿತ ಸುರಿದ ಮಳೆಗೆ ಭತ್ತದ ಬೆಳೆ ನೆಲಕ್ಕೆ ಬಾಗಿದೆ. ಭತ್ತದ ಬೆಳೆ ಹಾಲುತುಂಬಿ ತೆನೆ ಬಿಚ್ಚುವ, ಕೆಲವೆಡೆ ಕಟಾವಿಗೆ ಬಂದಿತ್ತು.

ಕೊರೊನಾ ಭೀತಿ ನಡುವೆ ಅಕಾಲಿಕ ವರುಣನ ಆಗಮನ ರೈತರ ಪಾಲಿಗೆ ಗಾಯದ ಮೇಲೆ‌ ಬರೆ ಎಳೆದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.