ADVERTISEMENT

‘ಸಾಲದ ಸದ್ಬಳಕೆಯಾಗಲಿ, ಸಕಾಲಕ್ಕೆ ಮರುಪಾವತಿಸಿ’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 15:02 IST
Last Updated 26 ಸೆಪ್ಟೆಂಬರ್ 2024, 15:02 IST
ಕಾರಟಗಿಯ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಲಿಂಗಪ್ಪ ಗಿಣಿವಾರಗೆ ಮುಖಂಡ ಅಯ್ಯಪ್ಪ ಉಪ್ಪಾರ ಮಾಲಾರ್ಪಣೆ ಮಾಡಿದರು
ಕಾರಟಗಿಯ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಲಿಂಗಪ್ಪ ಗಿಣಿವಾರಗೆ ಮುಖಂಡ ಅಯ್ಯಪ್ಪ ಉಪ್ಪಾರ ಮಾಲಾರ್ಪಣೆ ಮಾಡಿದರು   

ಕಾರಟಗಿ: ‘ಸಹಕಾರಿ ಸಂಘಗಳು ರೈತರಿಗೆ ಸೇವೆ, ಸಹಕಾರವನ್ನು ನೀಡುತ್ತಿವೆ. ರೈತರು ಸಂಘದಿಂದ ಪಡೆದ ಸಾಲವನ್ನು ಕೃಷಿ ಕಾರ್ಯಕ್ಕೆ ಬಳಸಿ, ಸಾಲದ ಸದುಪಯೋಗ ಮಾಡಿಕೊಳ್ಳುವುದರ ಜತೆಗೆ ಸಕಾಲಕ್ಕೆ ಮರುಪಾವತಿಸಿ, ಇತರ ರೈತರಿಗೂ ಲಾಭ ದೊರೆಯುವಂತೆ ಮಾಡಬೇಕು. ಸಂಘ ಹಾಗೂ ರೈತರು ಪರಸ್ಪರ ಅಭಿವೃದ್ಧಿ ಹೊಂದಬೇಕು ಎಂಬುದೇ ಸಹಕಾರಿಯ ತತ್ವವಾಗಿದೆ’ ಎಂದು ಸಂಘದ ನಿರ್ದೇಶಕ ಕೆ. ಶರಣಪ್ಪ ಪರಕಿ ಹೇಳಿದರು.

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ನಡೆದ 23-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ಸಂಘದ ಅಧ್ಯಕ್ಷ ಲಿಂಗಪ್ಪ ಗಿಣಿವಾರ ಅಧ್ಯಕ್ಷತೆ ವಹಿಸಿದ್ದರು. ಆರಂಭದಲ್ಲಿ ಸಹಕಾರಿಯ ರೂವಾರಿ ಸಿದ್ದನಗೌಡ ರಾಮನಗೌಡ ಪಾಟೀಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.

ADVERTISEMENT

ಸಂಘದ ಮುಖ್ಯ ಕಾರ್ಯನಿರ್ವಾಹಕ ಜಿ. ಭೀಮಣ್ಣ ಅವರು ವಾರ್ಷಿಕ ವರದಿ ಮಂಡಿಸಿ, ಕೆಲ ವಿಷಯಗಳಿಗೆ ಆಡಳಿತ ಮಂಡಳಿಯ ಅನುಮತಿ ಪಡೆದರು. ಶಿಥಿಲ ಕಟ್ಟಡಗಳ ಮರು ನಿರ್ಮಾಣ ಸಹಿತ ಸಂಘದ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಸಂಘದ ಉಪಾಧ್ಯಕ್ಷ ಹನುಮಂತಪ್ಪ ಈಡಿಗೇರ, ನಿರ್ದೇಶಕರಾದ ಶಿವರೆಡ್ಡಿ ನಾಯಕ ವಕೀಲ, ಶರಣೇಗೌಡ ಪೊಲೀಸ್‌ ಪಾಟೀಲ್‌, ಸಣ್ಣ ಲಿಂಗಪ್ಪ ಕಬ್ಬೇರ, ಪಂಪಾಪತಿ ಈಡಿಗೇರ, ಸುಕಮುನಿಯಪ್ಪ ಗರಡಿ ಪನ್ನಾಪುರ, ವೆಂಕಟೇಶ ಚಲುವಾದಿ, ದುರುಗಮ್ಮ ಉಪ್ಪಾರ, ಶಾಂತಮ್ಮ ಬಿಲ್ಗಾರ, ಉಮೇಶ ಭಂಗಿ, ಪ್ರಮುಖರಾದ ಪ್ರಹ್ಲಾದ ಜೋಷಿ, ತಾಯಪ್ಪ ಕೋಟ್ಯಾಳ, ಸೋಮನಾಳ ವೆಂಕಟೇಶ, ಅಯ್ಯಪ್ಪ ಉಪ್ಪಾರ, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.