ರಾಘವೇಂದ್ರ ಹಿಟ್ನಾಳ
ಕೊಪ್ಪಳ: ‘ಸದನ ಮುಗಿದಿದೆ, ಸ್ನೇಹಿತರು ಸೇರಿಕೊಂಡು ಖಾಸಗಿಯಾಗಿ ವಿದೇಶಕ್ಕೆ ಹೋಗುವ ಚರ್ಚೆ ಮಾಡಿದ್ದೇವೆ ಅಷ್ಟೇ. ನಮ್ಮ ಸ್ವಂತ ಹಣದಲ್ಲಿ ವಿದೇಶಕ್ಕೆ ಹೊಗಲು ನಿಮ್ಮ ತಕರಾರು ಇದೆಯೇ’ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಪ್ರಶ್ನಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ವಿದೇಶ ಪ್ರವಾಸಕ್ಕೆ ಹೋಗುವುದು ಖಚಿತವಾಗಿಲ್ಲ. ಹೋಗುವಾಗ ನಿಮಗೆ ತಿಳಿಸುವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ನಾಯಕರು ಮಾತನಾಡಿದ್ದಾರೆ. ಸುಮ್ಮನೆ ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಶಿವಕುಮಾರ್ ಅವರಿಗೆ ಬೇರೆ ರಾಜ್ಯದ ಉಸ್ತುವಾರಿ ಕೊಟ್ಟಿದ್ದಾರೆ. ಹಾಗಾಗಿ ಅವರು ದೆಹಲಿಗೆ ಹೋಗಿರಬಹುದು’ ಎಂದರು.
‘ಈಗಾಗಲೇ ಎಷ್ಟೋ ಜನ ವಿದೇಶಕ್ಕೆ ಹೋಗಿ ಬಂದಿದಾರೆ. ನಾನೇ ಹಿಂದೆ ವಿದೇಶಕ್ಕೆ ಹೋಗಿಬಂದಾಗ ಯಾರೂ ಕೇಳಿರಲಿಲ್ಲ. ಬಜೆಟ್ ಮಂಡನೆ ವೇಳೆ ಎಲ್ಲ ಶಾಸಕರೂ ಇರುತ್ತಾರೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.