
ಪ್ರಜಾವಾಣಿ ವಾರ್ತೆಕೊಪ್ಪಳ: ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎನ್ನುವ ದಾಖಲೆಯನ್ನು ಸರಿಗಟ್ಟಿದ್ದರಿಂದ ಸಿದ್ದರಾಮಯ್ಯ ಅವರ ಅಭಿಮಾನಿಗಳು ತಾಲ್ಲೂಕಿನ ಹಾಲವರ್ತಿ ಗ್ರಾಮದಲ್ಲಿ ಮಂಗಳವಾರ ಜವಾರಿ ಕೋಳಿ ಬಾಡೂಟ ಮಾಡಿಸಿ ಸಂಭ್ರಮಿಸಿದರು.
ಹಾಲವರ್ತಿ ಗ್ರಾಮ ಪಂಚಾಯಿತಿ ಸದಸ್ಯ ಆನಂದ ಕಿನ್ನಾಳ ಮಾತನಾಡಿ ‘ಸಿದ್ದರಾಮಯ್ಯನವರು ಈ ದಾಖಲೆಯನ್ನು ಮಾಡಿರುವುದು ಸಂತಸ ನೀಡಿದೆ. ಅವರು ರಾಜ್ಯ ಕಂಡ ಧೀಮಂತ ನಾಯಕರಾಗಿದ್ದಾರೆ. ಇನ್ನುಳಿದ ಅವಧಿಗೂ ಅವರೇ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ’ ಎಂದರು.
ಗ್ರಾಮದ ಮುಖಂಡರಾದ ಭರಮಪ್ಪ ಗೊರವರ, ಮುದಿಯಪ್ಪ ಆದೋನಿ, ಬಾಳಪ್ಪ ಕುರಗಡ್ಡಿ, ಸಿಂದೊಗೆಪ್ಪ ಹೊಸಳ್ಳಿ, ಮುತ್ತು ಹಾಲವರ್ತಿ, ಕೇಮಪ್ಪ ಇಟಗಿ, ಕುಷ್ಟಗಿ ಹನಮಂತ, ಶೇಖರಪ್ಪ ನಾಯಕ್, ಗಿಡ್ಡಪ್ಪ ಸಿರಗೇರಿ, ದೇವಪ್ಪ ಗೋರ್, ಹಾಲಪ್ಪ ಮಲ್ಲಕ್ಕಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.