ADVERTISEMENT

ಗಂಗಾವತಿ: ಭತ್ತದ ನಾಡಿನಲ್ಲಿ ಸೌಕರ್ಯ ಕೊರತೆ, ಪರದಾಟ

ಬಳಕೆ ಆಗದ ಶೌಚಾಲಯ, ಸ್ವಚ್ಛತೆ ಕಾಣದ ಊರುಗಳು; ಹದಗೆಟ್ಟ ರಸ್ತೆಗಳಿಂದ ಪ್ರಯಾಣಿಕರು ಸುಸ್ತು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 6:24 IST
Last Updated 18 ಏಪ್ರಿಲ್ 2022, 6:24 IST
ಗಂಗಾವತಿ ನಗರದ 2ನೇ ವಾರ್ಡಿನಲ್ಲಿ ಸಾರ್ವಜನಿಕ ಶೌಚಾಲಯ ದುರಸ್ತಿಗೆ ಕಾದು ಅಸ್ವಚ್ಚತೆಯಿಂದ ದುರ್ವಾಸನೆ ಬೀರುತ್ತಿರುವುದು
ಗಂಗಾವತಿ ನಗರದ 2ನೇ ವಾರ್ಡಿನಲ್ಲಿ ಸಾರ್ವಜನಿಕ ಶೌಚಾಲಯ ದುರಸ್ತಿಗೆ ಕಾದು ಅಸ್ವಚ್ಚತೆಯಿಂದ ದುರ್ವಾಸನೆ ಬೀರುತ್ತಿರುವುದು   

ಗಂಗಾವತಿ: ಪ್ರಸಿದ್ಧ ಧಾರ್ಮಿಕ ಮತ್ತು ಪ್ರವಾಸಿ ಸ್ಥಳ ಹಾಗೂ ವಾಣಿಜ್ಯ ವಹಿವಾಟಿನ ಮೂಲಕ ಭತ್ತನಾಡು ಎಂದು ಕರೆಸಿಕೊಂಡ ಗಂಗಾವತಿ ತಾಲ್ಲೂಕು ಮೂಲ ಸೌಕರ್ಯಗಳಿಲ್ಲದೆ ಬಳಲುತ್ತಿದೆ.

ತಾಲ್ಲೂಕು 2 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿ1 ನಗರಸಭೆ, 1 ತಾಲ್ಲೂಕು ಪಂಚಾಯಿತಿ, 18 ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡರು, ಪರಿಣಾಮಕಾರಿ ಆಡಳಿತವಿಲ್ಲದೆ ಸಮಸ್ಯೆ ಹಾಗೇ ಮುಂದುವರೆದಿವೆ.

ಈ ಮೊದಲು ಅವಿಭಜಿತ ತಾಲ್ಲೂಕಿನಲ್ಲಿ ಗಂಗಾವತಿ, ಕಾರಟಗಿ, ಕನಕಗಿರಿ ಮೂರು ತಾಲ್ಲೂಕುಗಳು ಇದ್ದವು. ತಾಲ್ಲೂಕು ಪ್ರದೇಶ ವ್ಯಾಪ್ತಿಯಿಂದ ಎರಡು ಹೊಸ ತಾಲ್ಲೂಕುಗಳ ಘೋಷಣೆ ಮಾಡಲಾಯಿತು. ಅಲ್ಲದೆ ಗಂಗಾವತಿ ಸಾಮಾನ್ಯ ಮತ್ತು ಕನಕಗಿರಿ ಮೀಸಲು ಕ್ಷೇತ್ರವೆಂದಾಗಿ ವಿಭಜನೆ ಮಾಡಲಾಯಿತು.

ADVERTISEMENT

ತಾಲ್ಲೂಕು ವ್ಯಾಪ್ತಿಯಲ್ಲಿ65ಕ್ಕೂ ಹೆಚ್ಚು ಹಳ್ಳಿಗಳಿವೆ. ಗಂಗಾವತಿ ನಗರ ಒಂದರಲ್ಲಿನ 35 ನಗರಸಭೆ ಸದಸ್ಯರುಸೇರಿ 1 ಲಕ್ಷ ಜನಸಂಖ್ಯೆ ಇದೆ. ಆದರೆಸಮಸ್ಯೆ ಮಾತ್ರ ಜನಸಂಖ್ಯೆಯಷ್ಟೇ ಏರುತ್ತಿರುವುದು ಮೂಲಸೌಕರ್ಯ ಕಲ್ಪಿಸುವಲ್ಲಿ ಸ್ಥಳೀಯ ಆಡಳಿತ ಹಿಂದೆ ಬಿದ್ದಿದೆ.

ಸ್ವಚ್ಚತೆ ಮರೀಚಿಕೆ: ಗಂಗಾವತಿ ನಗರದ 35 ವಾರ್ಡುಗಳಲ್ಲಿ ಸೇರಿ ನಿತ್ಯ 45 ಟನ್ ತ್ಯಾಜ್ಯ ಉತ್ಪತ್ತಿಯಾದರೆ, ತಾಲ್ಲೂಕಿನ ಎಲ್ಲ ಗ್ರಾ.ಪಂಗಳಲ್ಲಿ ಸೇರಿ 100 ಟನ್ನಿಗೂ ಹೆಚ್ಚು ಕಸ ಉತ್ಪತ್ತಿ ಆಗುತ್ತಿದೆ. ಆದರೆ ಕಸ ಮಾತ್ರ ವಿಲೇವಾರಿ ಆಗುತ್ತಿಲ್ಲ.

ನಗರ ಮತ್ತು ಗ್ರಾ.ಪಂಗಳಲ್ಲಿ ಕಸ ವಿಲೇವಾರಿ ವಾಹನಗಳು ಹೆಚ್ಚಿರದ ಕಾರಣ ತ್ಯಾಜ್ಯ ವಿಲೇವಾರಿ ಮಾಡಲು ಸಾಧ್ಯವಾಗದೆ ಕಸ ಹಾಗೇ ಉಳಿಯುತ್ತಿದೆ. ಉಳಿದ ಕಸವು ನಗರ ಮತ್ತು ಗ್ರಾಮೀಣ ಭಾಗದ ಪ್ರಮುಖ ರಸ್ತೆ, ವೃತ್ತ, ವಾರ್ಡು, ಅಂಗಡಿ, ಚರಂಡಿ, ತಿಪ್ಪೆಗಳಲ್ಲಿ ಎಸೆಯಲಾಗುತ್ತಿದೆ.

ಬಳಕೆ ಆಗದ ಶೌಚಾಲಯಗಳು: ನಗರದ ಮತ್ತು ಗ್ರಾಮೀಣ ಭಾಗದಲ್ಲಿರುವ ಸಾರ್ವಜನಿಕ ಮತ್ತು ಸಮುದಾಯ, ಗುಂಪು ಶೌಚಾಲಯಗಳು ಬಳಕೆ ಬಾರದೆ ಗಬ್ಬು ನಾರುತ್ತಿವೆ. ಇಲ್ಲಿನ ಶೌಚಾಲಯ ಸ್ವಚ್ಚತೆ ಇಲ್ಲದೆ, ಬಳಕೆ ನೀರಿನ ವ್ಯವಸ್ಥೆ ಇರದೆ, ರೋಗಗಳು ಹರಡು ತಾಣಗಳಾಗಿ ಮಾರ್ಪಟ್ಟಿವೆ. ಇದರಿಂದ ನಗರದಲ್ಲಿ ಶೇ.40 ಮಹಿಳೆಯರು, ಗ್ರಾಮೀಣ ಭಾಗದಲ್ಲಿ ಶೇ.70ರಷ್ಟು ಬಯಲನ್ನೆ ಆಶ್ರಯಿಸಿದ್ದಾರೆ.

ರಸ್ತೆಗಳು ಅಧೋಗತಿ: ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಸಂಚಾರಕ್ಕೆ ರಸ್ತೆಗಳೇ
ಇಲ್ಲ. ದ್ವಿಚಕ್ರ ವಾಹನ ಸಂಚಾರಕ್ಕೂ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ತಾಲ್ಲೂಕಿನ ಮರಕುಂಬಿ, ಗುಳದಾಳ, ಭಟ್ಟರನರಸಾಪುರ, ರಂಗಾಪುರ, ಹಣವಾಳ ಸೇರಿದಂತೆ ಇತರೆ ಗ್ರಾಮಗಳಿಗೆ ಹೋಗುವ ರಸ್ತೆಗಳು ಜಲ್ಲಿಕಲ್ಲು, ತೆಗ್ಗುದಿನ್ನೆಗಳಿಂದ ಕೂಡಿವೆ.

ತುರ್ತು ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗಗಳಿಂದ ನಗರಕ್ಕೆ ಚಿಕಿತ್ಸೆ ಕರೆತರುವ ಸಂದರ್ಭ ಏನಾದರೂ ಬಂದರೆ, ನಡು ದಾರಿಯಲ್ಲಿ ಜೀವ ಕಳೆದುಕೊಳ್ಳುವ ರೀತಿಯಲ್ಲಿ ರಸ್ತೆಗಳು ಹದೆಗೆಟ್ಟು ಹೋಗಿವೆ. ಈ ಕುರಿತು ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳು ಮನವಿ ಸಲ್ಲಿಸಿದರೂ, ಪ್ರಯೋಜನವಾಗಿಲ್ಲ.

ಚರಂಡಿಗಳ ಸ್ವಚ್ಚತೆ ಇಲ್ಲ: ನಗರದ ಮತ್ತು ಗ್ರಾಮೀಣ ಭಾಗದಲ್ಲಿ ಚರಂಡಿಗಳಲ್ಲಿ ಹೂಳು, ಕಸ ಸಂಗ್ರಹವಾಗಿ ಕೊಳಚೆ ನೀರು ಸರಾಗವಾಗಿ ಸಂಚಾರಿಸದೆ ದುರ್ವಾಸನೆ ಬೀರುತ್ತಿವೆ. ಇನ್ನೂ ಕೆಲ ಗ್ರಾಮಗಳಲ್ಲಿ ಅನುದಾನ ಬಳಸಬೇಕು ಎನ್ನುವನಿಟ್ಟಿನಲ್ಲಿ ಗ್ರಾ.ಪಂ ಸದಸ್ಯರು ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿ, ಬಳಕೆ ಬಾರದಂತೆ ಮಾಡಿದ್ದಾರೆ.

ನಿಲ್ಲಲು ಬಸ್ ನಿಲ್ದಾಣಗಳಿಲ್ಲ: ನಗರ ಮತ್ತು ಹೋಬಳಿ ಮಟ್ಟದಲ್ಲಿ ಬಿಟ್ಟರೆ ಮತ್ತೆಲ್ಲಿ ಸುಸಜ್ಜಿತ ಬಸ್ ನಿಲ್ದಾಣಗಳು ತಾಲ್ಲೂಕಿನಲ್ಲಿ ಕಾಣಸಿಗುವುದಿಲ್ಲ. ಗಂಗಾವತಿಯಿಂದ ಹುಲಗಿ ಮಾರ್ಗಕ್ಕೆ ತೆರಳು 16 ಗ್ರಾಮಗಳಲ್ಲಿ ಬಸ್ ನಿಲ್ದಾಣಗಳೇ ಇಲ್ಲ.

ಕೆಲ ಕಡೆ ಇದ್ದರು, ಅವು ಕುಸಿಯುವ ಹಂತದಲ್ಲಿವೆ. ಪ್ರಯಾ ಣಿಕರು ರಸ್ತೆಗೆ ನಿಂತೇ ಬಸ್ಸನ್ನು ನಿಲ್ಲಿಸಿ ಹೊರಡ ಬೇಕಾಗು ತ್ತದೆ. ಶಾಲೆ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು, ನಗರಕ್ಕೆ ತೆರಳು ಬಿಸಿನಲ್ಲಿಯೇ ನಿಂತು ಹೊರಡುತ್ತಾರೆ.

ದುರಸ್ತಿ ಆಗದ ನೀರಿನ ಘಟಕಗಳು: ತಾಲ್ಲೂಕಿನ ನಗರ ಮತ್ತು ಗ್ರಾ.ಪಂ ವ್ಯಾಪ್ತಿಯಲ್ಲಿ ಸೇರಿ ಅಂದಾಜು 100ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ ಶೇ.70ರಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಇನ್ನೂಳಿ ದವು ದುರಸ್ತಿಯಲ್ಲಿವೆ.

ಅವುಗಳನ್ನು ಸರಿಪಡಿಸಿದರು 3-4 ದಿನಗಳಲ್ಲಿ ಮತ್ತೆ ದುರಸ್ತಿಗೆ ಕಾಯುತ್ತವೆ.ಶುದ್ಧ ಘಟಕಗಳನ್ನು ಸರಿಪಡಿಸುವ ಎಂಜಿನಿಯರ್, ಮೆಕಾನಿಕ್ ಗಳು ದುರಸ್ತಿ ಮಾಡಲು ಸಮಯಕ್ಕೆ ಬಾರದ ಕಾರಣ ಹಲವು ಘಟಕಗಳು ಇನ್ನೂ ಪಾಳುಬಿದ್ದ ಸ್ಥಿತಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.