
ಅಳವಂಡಿ: ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ಹಾಗೂ ಸ್ಪರ್ಧಾತ್ಮಕ ಮನೋಭಾವ, ಜ್ಞಾನ ವಿಕಾಸಕ್ಕೆ ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದು ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗ್ರಾಮದ ಮುದುಕನಗೌಡ ಗಾಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಅಳವಂಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಸಂಯೋಜಕ ಮಹಾದೇವಪ್ಪ ಗುಳೇದ ಮಾತನಾಡಿ, ಪ್ರತಿ ಮಕ್ಕಳಲ್ಲಿ ಒಂದು ವಿಶೇಷ ಪ್ರತಿಭೆ ಇರುತ್ತದೆ. ಅದರ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ. ಕಲಿಕೆ ಎಂದರೆ ಕೇವಲ ಅಂಕ ಗಳಿಕೆ ಅಲ್ಲ, ಕಲಿಕೆ ಜೊತೆ ವಿವಿಧ ಚಟುವಟಿಕೆ ಮೂಲಕ ಮಕ್ಕಳ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ ಅನುಕೂಲ ವಾಗುತ್ತದೆ ಎಂದರು. ಪದವೀಧರ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ ಕೇಸಲಾಪುರ ಮಾತನಾಡಿದರು.
ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಎಸ್‌ಡಿಎಂಸಿ ಅಧ್ಯಕ್ಷ ಶಂಕ್ರಪ್ಪ ಕರಡಿ, ಕನಕಪ್ಪ, ಹನುಮರಡ್ಡಿ, ಹೇಮಣ್ಣ ಕವಲೂರು, ಪ್ರಭಾರ ಪಿಡಿಒ ಕೊಟ್ರಪ್ಪ ಅಂಗಡಿ, ವಿಜಕುಮಾರ ಟಿಕಾರೆ, ಪ್ರಮುಖರಾದ ಗುರುಬಸವರಾಜ, ಶಶಿಕಲಾ ನಾಗರಳ್ಳಿ, ರೇಣುಕಾರಡ್ಡಿ, ಹನುಮವ್ವ ವಡ್ಡರ, ಮಂಜುನಾಥ, ರಂಗಪ್ಪ ಕರಡಿ, ಗ್ಯಾನಪ್ಪ ಹಳ್ಳಿಕೇರಿ, ಬಸವರಡ್ದೆಪ್ಪ ಹಳ್ಳಿಕೇರಿ, ತೋಟಯ್ಯ, ಮೈಲಾರಪ್ಪ, ಯಲ್ಲಪ್ಪ ಬಂಡಿ, ಅಶೋಕ, ಹನುಮರಡ್ಡಿ, ಹೇಮಣ್ಣ ಕವಲೂರು, ವಿಶ್ವನಾಥ, ಮಂಜುನಾಥ, ದೇವರಾಜ, ಹನುಮಂತ, ಪ್ರತಿಭಾ ಮೇಟಿ, ಆನಂದ, ಮಲ್ಲಪ್ಪ, ಶಿರಸಪ್ಪ, ನಾಗರಾಜ್, ಕೋಟೇಪ್ಪ, ಶ್ರೀದೇವಿ, ಶಾಂತಾ, ಸುರೇಶ, ಮಹಾಂತೇಶ, ಶರಣಪ್ಪ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.