ADVERTISEMENT

ತೊಗರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 5:23 IST
Last Updated 26 ಡಿಸೆಂಬರ್ 2025, 5:23 IST
ಆದೇಶ ರಾಮತ್ನಾಳ
ಆದೇಶ ರಾಮತ್ನಾಳ   

ತಾವರಗೇರಾ: ಕೇಂದ್ರ ಸರ್ಕಾರ ನಿಗದಿ ಮಾಡಿರುವ ತೊಗರಿ ಕ್ವಿಂಟಾಲ್ ಬೆಂಬಲ ಬೆಲೆ ₹8 ಸಾವಿರವಿದೆ. ರಾಜ್ಯ ಸರ್ಕಾರ ಕೂಡ ₹500 ಭರಿಸಿ ತೊಗರಿಯನ್ನು ಖರೀದಿ ಕೇಂದ್ರಗಳಲ್ಲಿ ಖರೀದಿ ಮಾಡಬೇಕು ಎಂದು ರಾಜ್ಯ ರೈತ ಸಂಘದ ಕುಷ್ಟಗಿ ತಾಲ್ಲೂಕು ಅಧ್ಯಕ್ಷ ಆದೇಶ ರಾಮತ್ನಾಳ ಆಗ್ರಹಿಸಿದ್ದಾರೆ.

ರೈತರ ಅನುಕೂಲಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸಿರುವದು ಸ್ವಾಗತಾರ್ಹ. ಆದರೆ ಕೇಂದ್ರ ಸರ್ಕಾರ ನೀಡುವ ಬೆಂಬಲ ಬೆಲೆಯನ್ನು ಮಾತ್ರ ನೀಡುತ್ತಿರುವುದು ಖಂಡನೀಯ. ರಾಜ್ಯ ಸರ್ಕಾರವು ಸಹ ₹500 ನಿಗದಿ ಮಾಡಿ ಒಟ್ಟು ಕ್ವಿಂಟಾಲ ತೊಗರಿಗೆ ₹8,500 ದರ ನಿಗದಿ ಮಾಡಿದರೆ ರೈತರಿಗೆ ಅನುಕೂಲವಾಗುವುದು ಎಂದಿದ್ದಾರೆ.

ಈ ಕುರಿತು ರಾಜ್ಯ ಸರ್ಕಾರ ಡಿ.29ರೊಳಗೆ ನಿರ್ಧರಿಸಿ ಘೋಷಣೆ ಮಾಡಬೇಕು. ಇಲ್ಲವಾದರೆ ಕುಷ್ಟಗಿ ತಾಲ್ಲೂಕು ಮಟ್ಟದಲ್ಲಿ ರೈತರು ಮತ್ತು ರೈತ ಸಂಘದಿಂದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.