ADVERTISEMENT

ಅಸುರಕ್ಷತೆ, ಅಭದ್ರತೆಯ ಬದುಕಿಗೆ ನೆರವಾಗಿ

ಕಟ್ಟಡ ಕಾರ್ಮಿಕರ ಪ್ರಥಮ ತಾಲ್ಲೂಕು ಸಮ್ಮೇಳನದಲ್ಲಿ ಕಾರ್ಮಿಕ ಮುಖಂಡ ಕೆ.ಮಹಾಂತೇಶ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2021, 3:21 IST
Last Updated 14 ಅಕ್ಟೋಬರ್ 2021, 3:21 IST
ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆದ ಕಟ್ಟಡ ಕಾರ್ಮಿಕರ ಪ್ರಥಮ ತಾಲ್ಲೂಕು ಸಮ್ಮೇಳನವನ್ನು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಉದ್ಘಾಟಿಸಿದರು. ಕಾರ್ಮಿಕ ಇಲಾಖೆ ಅಧಿಕಾರಿ ವೀಣಾ ಮಾಸ್ತಿ, ಕಾಶೀಂ ಸರ್ದಾರ್, ಶಿವಶಂಕರ್ ತಳವಾರ, ಬಸವರಾಜ್ ಹಿರೇಗೌಡರ್ ಮುಂತಾದವರು ಇದ್ದರು
ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆದ ಕಟ್ಟಡ ಕಾರ್ಮಿಕರ ಪ್ರಥಮ ತಾಲ್ಲೂಕು ಸಮ್ಮೇಳನವನ್ನು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಉದ್ಘಾಟಿಸಿದರು. ಕಾರ್ಮಿಕ ಇಲಾಖೆ ಅಧಿಕಾರಿ ವೀಣಾ ಮಾಸ್ತಿ, ಕಾಶೀಂ ಸರ್ದಾರ್, ಶಿವಶಂಕರ್ ತಳವಾರ, ಬಸವರಾಜ್ ಹಿರೇಗೌಡರ್ ಮುಂತಾದವರು ಇದ್ದರು   

ಕೊಪ್ಪಳ: ದೇಶದಲ್ಲಿನ ಕಟ್ಟಡ ನಿರ್ಮಾಣ ಕಾರ್ಮಿಕರು ನಿತ್ಯ ಅಸುರಕ್ಷಿತೆ ಮತ್ತು ಅಭದ್ರತೆ ಬದುಕಿನಲ್ಲಿ ದಿನದೂಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟದರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಆತಂಕ ವ್ಯಕ್ತಪಡಿಸಿದರು.

ನಗರದ ಸಾಹಿತ್ಯ ಭವನ ನಡೆದ ಕಟ್ಟಡ ಕಾರ್ಮಿಕರ ಪ್ರಥಮ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಅತ್ಯಂತ ಅಪಾಯಕಾರಿ ಸನ್ನಿವೇಶಗಳಲ್ಲಿ ಕೆಲಸ ಮಾಡುವ ಈ ಕಾರ್ಮಿಕರಿಗೆ ಸರ್ಕಾರ ಸೌಲಭ್ಯಗಳ ಜತೆ ಕೆಲಸದ ಸ್ಥಳದಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸಬೇಕು. ನಿರ್ಮಾಣ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಕನಿಷ್ಠ ಶೌಚಾಲಯ, ಕುಡಿಯುವ ನೀರು ಮಕ್ಕಳಿಗೆ ಶಿಶುಪಾಲನ ಕೇಂದ್ರ ಮತ್ತು ಅಪಘಾತಗಳಾದಾಗ ತಕ್ಷಣವೇ ವೈದ್ಯಕೀಯ ನೆರವು ಸಿಗುವಂತಾಗಬೇಕು. ಕಾರ್ಮಿಕರು ಮಂಡಳಿಯಿಂದ ಸಿಗುವ ಸೌಲಭ್ಯಗಳ ಜತೆಗೆ ಸುರಕ್ಷತೆಯ ಬದುಕಿಗಾಗಿ ಗಮನ ನೀಡಬೇಕು ಎಂದರು.

ಜಿಲ್ಲಾ ಕಾರ್ಮಿಕಾಧಿಕಾರಿ ವೀಣಾ ಮಾಸ್ತಿ ಮಾತನಾಡಿ, ಕೊವೀಡ್ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಡಕ್ಕೆಒಳಗಾಗಿದ್ದರು ಇಂತಹ ಸನ್ನಿವೇಶದಲ್ಲಿ ಸರ್ಕಾರ ಅವರಿಗೆ ಆಹಾರ, ನಗದು ಹಣ ಮತ್ತುಪಡಿತರ ವ್ಯವಸ್ಥೆಯನ್ನು ಒದಗಿಸಿ ಅವರ ಬದುಕನ್ನು ರಕ್ಷಿಸಲು ಪ್ರಯತ್ನಗಳನ್ನು ನಡೆಸಿದೆ. ಕಾರ್ಮಿಕರೆಲ್ಲರೂ ಮಂಡಳಿಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆದು ತಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳಬೇಕು ಎಂದರು.

ADVERTISEMENT

ಕಾರ್ಮಿಕ ನಿರೀಕ್ಷಕರಾದ ಶಿವಶಂಕರ್ ತಳವಾರ, ಬಾಲಕಾರ್ಮಿಕ ಜಿಲ್ಲಾ ನಿರ್ದೇಶಕ ಬಸವರಾಜ್ ಹಿರೇಗೌಡರ್ ಮಾತನಾಡಿದರು. ಜಿಲ್ಲಾ ಸಂಚಾಲಕ ಕಾಶಿಂ ಸರ್ದಾರ್ ಸ್ವಾಗತಿಸಿದರು. ಇಸ್ಮಾಯಿಲ್
ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಿದೇವಿ ಸೋನಾರ, ಹನುಮೇಶ ಕಲ್ಮಂಗಿ, ಗೌಸಸಾಬ ನದಾಫ್, ಅನ್ನಪೂರ್ಣಮ್ಮ ಬೃಹನ್ಮಠ, ಸುಂಕಪ್ಪ ಗದಗ, ಮಂಜುನಾಥ ಡಗ್ಗಿ, ಅಮೀರಖಾನ, ಮಹ್ಮದ್‌ ಸಲೀಂ, ಅಮೀರಪಾಷಾ, ನಾಗರಾಜ ಬಾರಕೇರ, ನಿಂಗಪ್ಪ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.