ADVERTISEMENT

ಗಂಗಾವತಿ: ಹುಲಿಗೆಮ್ಮ ದೇವಿ ಪಾದಗಟ್ಟೆಗೆ ಬಂದ ತುಂಗಭದ್ರಾ ನೀರು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 9:20 IST
Last Updated 11 ಆಗಸ್ಟ್ 2022, 9:20 IST
   

ಕೊಪ್ಪಳ/ಗಂಗಾವತಿ: ತುಂಗಭದ್ರಾ ನದಿಯಿಂದ 1.80 ಕ್ಯುಸೆಕ್ ನೀರು ಹೊರಬಿಟ್ಟಿರುವ ಕಾರಣ ಗುರುವಾರ ಹುಲಿಗೆಮ್ಮಾ ದೇವಿ ಪಾದಗಟ್ಟೆ ತನಕ ನೀರು ಬಂದಿವೆ.

ಪಾದಗಟ್ಟಿಯು ನದಿಗೆ ಸಮೀಪದಲ್ಲಿಯೇ ಇದ್ದು, ಅಲ್ಲಿ ಜನರ ಓಡಾಟಕ್ಕೆ ನಿಷೇಧ ಹೇರಲಾಗಿದೆ.

ಗಂಗಾವತಿ ತಾಲ್ಲೂಕಿನ ಅಂಜನಾದ್ರಿ, ಹನುಮನಹಳ್ಳಿ, ಆನೆಗೊಂದಿ ಭಾಗದಲ್ಲಿ ನೀರಿನ ಹರಿವು ಬುಧವಾರಕ್ಕಿಂತಲೂ ಕಡಿಮೆಯಾಗಿದೆ.

ADVERTISEMENT

ತಲೆ ನೋವಾದ ಕಸ: ನೀರಿನ ರಭಸಕ್ಕೆ ಪ್ರತಿ ಸಲ ಕಸ, ಕಟ್ಟಿಗೆ, ಪ್ಲಾಸ್ಟಿಕ್ ತ್ಯಾಜ್ಯವೆಲ್ಲ ಸೇರಿ ನದಿ ಪಾತ್ರದ ಜಮೀನುಗಳಲ್ಲಿ ಸಂಗ್ರಹವಾಗುತ್ತದೆ. ಇದರಿಂದ ಬಾಳೆ ಕೊಳೆತು ನೆಲಕ್ಕೆ ಬಾಗಿ, ಕಂದು ಬಣ್ಣಕ್ಕೆ ತಿರುಗಿದರೆ, ಭತ್ತದ ಸಸಿ ನೆಲಕ್ಕೆ ಹಾಸಿಕೊಳ್ಳುತ್ತಿವೆ.

ನೀರಿನಿಂದ ಬೆಳೆಗಳಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿರುವ ಕಾರಣ ರೈತರು ಕಸವನ್ನು ಬೇರೆಡೆಗೆ ತೆಗೆದುಹಾಕಲು ಹರಸಾಹಸ ಪಡುತ್ತಿದ್ದಾರೆ. ಕಸ ತೆಗೆದರೂ ನದಿಗೆ ನೀರು ಹರಿಸಿದ ಕೂಡಲೇ ಮತ್ತೆ ತ್ಯಾಜ್ಯ ಜಮೀನುಗಳಲ್ಲಿ ಸಂಗ್ರಹವಾಗುತ್ತಿದೆ.

ಸಾಣಾಪುರ, ಹನುಮನಹಳ್ಳಿ, ಚಿಕ್ಕಜಂತಕಲ್, ಹೆಬ್ಬಾಳ, ಮುಸ್ಟೂರು ಭಾಗದ ಬಾಳೆ, ಭತ್ತ, ಖಾಲಿ ಜಮೀನುಗಳಲ್ಲಿ ಕಳೆದ ಮೂರು ಸಲ ಹರಿಸಿದ ನೀರಿಗೆ ಸಂಗ್ರಹವಾದ ಕಸ ತೆಗೆಸಲು ಕೂಲಿಗಳಿಗೆ ಸಾಕಷ್ಟು ಹಣ ವ್ಯಯಿಸಿದ್ದು, ಇದೀಗ ಮತ್ತೆ ಕಸ ಸಂಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.