ADVERTISEMENT

ಕೊಪ್ಪಳ: ಹಳ್ಳದಲ್ಲಿ ಕೊಚ್ಚಿಹೋದ ಇಬ್ಬರು ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 8:22 IST
Last Updated 28 ಸೆಪ್ಟೆಂಬರ್ 2020, 8:22 IST
ಯಲಬುರ್ಗಾ ತಾಲ್ಲೂಕಿನ ಕರಮುಡಿ ಗ್ರಾಮದ ಹೊರವಲಯದಲ್ಲಿ ಕೊಚ್ಚಿಹೋದ ಮಹಿಳೆಯರ ಹುಡುಕಾಟದಲ್ಲಿ ನಿರತರಾದ ಪೊಲೀಸ್ ಹಾಗೂ ಅಗ್ನಿಶಾಮಕದಳ ಸಿಬ್ಬಂದಿ
ಯಲಬುರ್ಗಾ ತಾಲ್ಲೂಕಿನ ಕರಮುಡಿ ಗ್ರಾಮದ ಹೊರವಲಯದಲ್ಲಿ ಕೊಚ್ಚಿಹೋದ ಮಹಿಳೆಯರ ಹುಡುಕಾಟದಲ್ಲಿ ನಿರತರಾದ ಪೊಲೀಸ್ ಹಾಗೂ ಅಗ್ನಿಶಾಮಕದಳ ಸಿಬ್ಬಂದಿ   

ಯಲಬುರ್ಗಾ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಕರಮುಡಿ ಗ್ರಾಮದ ಹೊರವಲಯದಲ್ಲಿ ಭಾನುವಾರ ಸಂಜೆ ಹಳ್ಳ ದಾಟಲು ಯತ್ನಿಸಿ ಇಬ್ಬರು ಮಹಿಳೆಯರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಗ್ರಾಮದ ರತ್ನವ್ವ ಗುರಪ್ಪ ಮಾನಶೆಟ್ಟಿ (48) ಮತ್ತು ಶಾಂತವ್ವ ದೇವಪ್ಪ ಮ್ಯಾಗೇರಿ (44) ಕೊಚ್ಚಿಕೊಂಡು ಹೋದವರು. ಭಾರಿ ಮಳೆ ಸುರಿದ ಕಾರಣ ಹಳ್ಳ ತುಂಬಿ ಹರಿಯುತಿತ್ತು. ಹೊಲದ ಕೃಷಿ ಕೆಲಸಕ್ಕೆಂದು ಹೋಗಿದ್ದ ಅವರಿಬ್ಬರೂ ಹಳ್ಳವನ್ನು ದಾಟಲು ಯತ್ನಿಸಿದ ವೇಳೆ ಘಟನೆ ಜರುಗಿದೆ.

ಅವರಿಬ್ಬರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ತಹಶೀಲ್ದಾರ್ ಶ್ರೀಶೈಲ ತಳವಾರ ತಿಳಿಸಿದ್ದಾರೆ. ಯಲಬುರ್ಗಾ ಪಿಎಸ್‍ಐ ಹನಮಂತಪ್ಪ ತಳವಾರ ನೇತೃತ್ವದಲ್ಲಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.