ADVERTISEMENT

ಕೊಪ್ಪಳ: ಸರಾಯಿ ಕುಡಿದು ಇಬ್ಬರು ಯುವಕರು ಸಾವು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 16:08 IST
Last Updated 8 ಫೆಬ್ರುವರಿ 2026, 16:08 IST
   

ಕೊಪ್ಪಳ: ತಾಲ್ಲೂಕಿನ ಕೂಕನಪಳ್ಳಿ ಗ್ರಾಮದ ಸೀಮೆಯಲ್ಲಿರುವ ಶಾನುಭೋಗರ ಹೊಲದಲ್ಲಿ ಸರಾಯಿ (ಸ್ಪಿರಿಟ್‌) ಕುಡಿದ ಪರಿಣಾಮ ಇಬ್ಬರು ಯುವಕರು ಪ್ರಾಣತೆತ್ತಿದ್ದು, ಇನ್ನೊಬ್ಬ ಯುವಕ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾನೆ.

ನಾಲ್ಕೈದು ಜನ ಯುವಕರು ಸೇರಿ ಫೆ. 4ರಂದು ಸ್ಪಿರಿಟ್‌ ಕುಡಿದಿದ್ದು, ಅದರಲ್ಲಿ ಅಮರಯ್ಯ ಹಿರೇಮಠ (35) ಹಾಗೂ ರಮೇಶ್‌ ಹೊಸಹಳ್ಳಿ (25) ಮೃತಪಟ್ಟಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ 33 ವರ್ಷದ ಶರಣಪ್ಪ ಹಂಚಿನಾಳ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಮೇಶ ತಂದೆ ಯಮನಪ್ಪ ಹೊಸಳ್ಳಿ ಮುನಿರಾಬಾದ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ‘ರಮೇಶ, ಅಮರಯ್ಯ ಹಿರೇಮಠ, ಶರಣಪ್ಪ ಹಂಚಿನಾಳ ಹಾಗೂ ಶರಣಪ್ಪ ಗುರಿಕಾರ ನಾಲ್ಕು ಜನ ಸೇರಿಕೊಂಡು ಕುಡಿದು ಅಸ್ವಸ್ಥರಾಗಿದ್ದಾರೆ. ಕುಡಿಯಲು ಯೋಗ್ಯವಲ್ಲ ಎಂದು ಗೊತ್ತಿದ್ದರೂ ಟ್ಯಾಂಕರ್‌ ಲಾರಿಯಿಂದ ಸ್ಪಿರಿಟ್‌ ತಂದುಕೊಟ್ಟ ಮಾರುತಿ ಬಂಡಿ, ಶರಣಪ್ಪ ಗುರಿಕಾರ ನನ್ನ ಮಗನ ಸಾವಿಗೆ ಕಾರಣರಾಗಿದ್ದಾರೆ. ಅವರ ವಿರುದ್ಧ ಕ್ರಮ ವಹಿಸಬೇಕು’ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.