ADVERTISEMENT

ಅನಧಿಕೃತ ಮರಳು ಸಂಗ್ರಹ: 220 ಮೆಟ್ರಿಕ್ ಟನ್ ಜಪ್ತಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 15:36 IST
Last Updated 23 ಸೆಪ್ಟೆಂಬರ್ 2022, 15:36 IST
ಕೊಪ್ಪಳ ತಾಲ್ಲೂಕಿನಲ್ಲಿ ಅಕ್ರಮ ಮರಳು ಸಂಗ್ರಹ ಜಪ್ತಿ ಮಾಡಿದ ಅಧಿಕಾರಿಗಳು
ಕೊಪ್ಪಳ ತಾಲ್ಲೂಕಿನಲ್ಲಿ ಅಕ್ರಮ ಮರಳು ಸಂಗ್ರಹ ಜಪ್ತಿ ಮಾಡಿದ ಅಧಿಕಾರಿಗಳು   

ಕೊಪ್ಪಳ: ಜಿಲ್ಲೆಯ ಕಿನ್ನಾಳ ಮತ್ತು ಮಾದಿನೂರು ಗ್ರಾಮಗಳಲ್ಲಿ ಅನಧಿಕೃತವಾಗಿ ಎತ್ತುವಳಿ ಮಾಡಿ ಸಂಗ್ರಹಿಸಿದ್ದ ಮರಳು ಜಪ್ತಿ ಮಾಡಲಾಗಿದೆ.

ಒಟ್ಟು 14 ಸ್ಥಳಗಳಲ್ಲಿ ಸಮೀಪದ ಹಿರೇಹಳ್ಳದ ಪಾತ್ರದಿಂದ ಅನಧಿಕೃತವಾಗಿ ಎತ್ತುವಳಿ ಮಾಡಿ ಸಂಗ್ರಹಿಸಿದ್ದ ಅಂದಾಜು 220 ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಲಾಗಿದೆ. ಭೂ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ವಿರುದ್ಧ ಪ್ರಕ್ರಿಯೆ ಪ್ರಗತಿಯಲ್ಲಿದೆ ಇಲಾಖೆ ಪ್ರಕಟಣೆ ತಿಳಿಸಿದೆ.

ಕಿನ್ನಾಳ, ಮಾದಿನೂರು ಗ್ರಾಮಗಳಲ್ಲಿ ಅನಧಿಕೃತ ಮರಳು ಸಾಗಣೆ ಮಾಡಲಾಗುತ್ತಿದೆ ಎನ್ನುವ ದೂರು ಕೇಳಿ ಬಂದಿತ್ತು. ತಾಲ್ಲೂಕು ಮರಳು ರಕ್ಷಣಾ ಉಸ್ತುವಾರಿ ಸಮಿತಿಯ ಸದಸ್ಯರಾದ ಕೊಪ್ಪಳ ತಹಶೀಲ್ದಾರ್‌ ವಿಠ್ಠಲ ಚೌಗುಲೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಿ. ಸನತ್, ಗ್ರಾಮೀಣ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಮುದ್ದುರಂಗ, ಪಿಡಿಒಗಳಾದ ವೀರಣ್ಣ ಹಾಗೂ ಪೂರ್ಣಚಂದ್ರಸ್ವಾಮಿ ಅವರನ್ನು ಒಳಗೊಂಡ ತಂಡ ದಾಳಿ ನಡೆಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.