ADVERTISEMENT

ತಾವರಗೇರಾ: ಸಂಭ್ರಮದ ಉರುಸ್

​ಪ್ರಜಾವಾಣಿ ವಾರ್ತೆ
Published 15 ಮೇ 2025, 16:42 IST
Last Updated 15 ಮೇ 2025, 16:42 IST
ತಾವರಗೇರಾ ಪಟ್ಟಣದಲ್ಲಿ ಗುರುವಾರ ಸೂಫಿಸಂತ ಖಾಜಾ ಬಂದೇನವಾಜ್ ಮತ್ತು ಶಾಮೀದ್ ಅಲಿ ದರ್ಗಾದ ಉರುಸ್ ನಡೆಯಿತು
ತಾವರಗೇರಾ ಪಟ್ಟಣದಲ್ಲಿ ಗುರುವಾರ ಸೂಫಿಸಂತ ಖಾಜಾ ಬಂದೇನವಾಜ್ ಮತ್ತು ಶಾಮೀದ್ ಅಲಿ ದರ್ಗಾದ ಉರುಸ್ ನಡೆಯಿತು   

ತಾವರಗೇರಾ: ಇಲ್ಲಿನ ಹಜರತ್ ಖಾಜಾ ಬಂದೇನವಾಜ್ ಮತ್ತು ಶಾಮೀದ್ ಅಲಿ ದರ್ಗಾ ಉರುಸ್ ಗುರುವಾರ ಸಂಭ್ರಮದಿಂದ ನಡೆಯಿತು.

ಭಕ್ತರು ದರ್ಗಾಕ್ಕೆ ದೀಡ್‌ ನಮಸ್ಕಾರ ಹಾಕಿ, ಸಕ್ಕರೆ ನೈವೇಧ್ಯವನ್ನು ಸಲ್ಲಿಸಿದರು. ಹಿಂದೂ ಮುಸ್ಲಿಂ ಎರಡೂ ಸಮುದಾಯದ ಜನರು ಸೇರಿ ಆಚರಿಸುವ ಉರುಸ್ ಸಂಭ್ರಮದಿಂದ ಕೂಡಿತ್ತು. ಪಟ್ಟಣವು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಬಂದಿದ್ದ ಭಕ್ತರು ಸಂಜೆವರೆಗೂ ಸಾಲುಗಟ್ಟಿ ನಿಂತು ದರ್ಶನ ಪಡೆದರು.

ಶಾಂತಿ–ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ ನಿಯೋಜಿಸಲಾಗಿತ್ತು. ಶ್ಯಾಮೀದಲಿ ದರ್ಗಾ ಆವರಣದಲ್ಲಿ ಇದೇ ಪ್ರಥಮ ಬಾರಿಗೆ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಉರುಸ್ ಪ್ರಯುಕ್ತ ಜನಪ್ರತಿನಿಧಿಗಳು ಸಹ ದರ್ಶನ ಪಡೆದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.