ADVERTISEMENT

ಕನಕಗಿರಿ: ವೀರಶೈವ ಲಿಂಗಾಯತ ಮಹಾಸಭಾಕ್ಕೆ ನಿವೇಶನ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 6:52 IST
Last Updated 11 ಡಿಸೆಂಬರ್ 2025, 6:52 IST
ಕನಕಗಿರಿಯ ವೀರಶೈವ ಲಿಂಗಾಯತ ಸಮಾಜದ ಮಹಾಸಭಾದವರು ನಿವೇಶನ ನೀಡುವಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹುಸೇನಬೀ ಹಾಗೂ ಮುಖ್ಯಾಧಿಕಾರಿ ಲಕ್ಣ್ಮಣ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಿದರು
ಕನಕಗಿರಿಯ ವೀರಶೈವ ಲಿಂಗಾಯತ ಸಮಾಜದ ಮಹಾಸಭಾದವರು ನಿವೇಶನ ನೀಡುವಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹುಸೇನಬೀ ಹಾಗೂ ಮುಖ್ಯಾಧಿಕಾರಿ ಲಕ್ಣ್ಮಣ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಿದರು   

ಕನಕಗಿರಿ: ನೂತನ ತಾಲ್ಲೂಕು ಕೇಂದ್ರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಕ್ಕೆ ಸಿಎ ನಿವೇಶನ ನೀಡುವಂತೆ ಒತ್ತಾಯಿಸಿ ಮಂಗಳವಾರ ಮನವಿ ಸಲ್ಲಿಸಲಾಯಿತು.

ಮಹಾಸಭಾದ ಮುಖಂಡರು ಮಾತನಾಡಿ, ‘ಪಟ್ಟಣದಲ್ಲಿ ವೀರಶೈವ ಲಿಂಗಾಯತ ಸಮಾಜ ದೊಡ್ಡ ಜನಸಂಖ್ಯೆ ಹೊಂದಿದೆ. ಆದರೆ ಸಮಾಜಕ್ಕೆ ಯಾವುದೇ ಸಮುದಾಯ ಭವನ ಇಲ್ಲ, ಮಹಾಸಭಾ ಸಂಘಟನೆಯಿಂದ ಸಾಕಷ್ಟು ಜನಪರ ಕೆಲಸ ನಡೆಯುತ್ತಿದ್ದು ಸಮಾಜದ ಕ್ಷೇಮಾಭಿವೃದ್ಧಿ ಕಾರ್ಯಗಳಿಗೆ, ಸಮುದಾಯ ಭವನ ನಿರ್ಮಾಣಕ್ಕೆ ಪಟ್ಟಣದಲ್ಲಿ ಹತ್ತು ಸಾವಿರ ಚದರ ಅಡಿ ಹೊಂದಿದ ಸಿಎ ನಿವೇಶನ ನೀಡಬೇಕು’ ಎಂದು ಅವರು ಆಗ್ರಹಿಸಿದರು. ಬಣಜಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಶರಣಬಸಪ್ಪ ಭತ್ತದ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ವೀರೇಶ ಸಮಗಂಡಿ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಮಾಜಿ ಅಧ್ಯಕ್ಷ ಮಹಾಂತೇಶ ಸಜ್ಜನ್, ಪಂಚ ಸೈನ್ಯದ ತಾಲ್ಲೂಕು ಅಧ್ಯಕ್ಷ ನಾಗರಾಜ ಭಾವಿಕಟ್ಟಿ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರವಿ ಪಾಟೀಲ, ಮಡಿವಾಳ ಸಮಾಜದ ತಿಪ್ಪಣ್ಣ ಮಡಿವಾಳರ, ಪ್ರಮುಖರಾದ ನೀಲಕಂಠಗೌಡ ಪಾಟೀಲ, ಶರಣಪ್ಪ ಮರಿಯಪ್ಪ ಭತ್ತದ, ಶರಣಬಸವ ಹುಲಿಹೈದರ, ರುದ್ರಮುನಿ ದೋಟಿಹಾಳ, ಚನ್ನಪ್ಪ ತೆಗ್ಗಿನಮನಿ, ಪ್ರಶಾಂತ ತೆಗ್ಗಿನಮನಿ, ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರಾದ ಸಂಗಪ್ಪ ಸಜ್ಜನ್, ಸುರೇಶ ಗುಗ್ಗಳಶೆಟ್ರ, ಅನಿಲಕುಮಾರ, ಶರಣೆಗೌಡ ಇತರರು ಇದ್ದರು.

ಅಧ್ಯಕ್ಷೆ ಹುಸೇನಬೀ ಚಳ್ಳಮರದ ಹಾಗೂ ಮುಖ್ಯಾಧಿಕಾರಿ ಲಕ್ಷ್ಮಣ‌ ಕಟ್ಟಿಮನಿ ಅವರು ಮನವಿ ಸ್ವೀಕರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.