ADVERTISEMENT

ಅನೈತಿಕತೆಗೆ ಕಡಿವಾಣ ಹಾಕದಿದ್ದರೆ ಅರಾಜಕತೆ: ವಿಶ್ವಪ್ರಸನ್ನ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 2 ಮೇ 2025, 15:27 IST
Last Updated 2 ಮೇ 2025, 15:27 IST
   

ಗಂಗಾವತಿ (ಕೊಪ್ಪಳ ಜಿಲ್ಲೆ): ‘ಸರ್ಕಾರಗಳ ಆಡಳಿತ ಹಾಗೂ ನ್ಯಾಯಾಂಗ ವ್ಯವಸ್ಥೆ ಮೇಲೆ ಜನರು ವಿಶ್ವಾಸ ಕಳೆದುಕೊಂಡಾಗ ಸಮಾಜದಲ್ಲಿ ಕೊಲೆ, ಕಳ್ಳತನ, ಅತ್ಯಾಚಾರ, ದರೋಡೆ, ಹಲ್ಲೆಯಂಥ ಪ್ರಕರಣಗಳು ಹೆಚ್ಚಾಗುತ್ತವೆ. ಇದನ್ನೇ ಅರಾಜಕತೆ ಎನ್ನಲಾಗುತ್ತದೆ’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಸತ್ಯನಾರಾಯಣ ದೇವಸ್ಥಾನದಲ್ಲಿ ಶುಕ್ರವಾರ ನಡೆದ ವಿಶ್ವೇಶತೀರ್ಥ ಸಭಾಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ ‘ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಕೊಲೆ ಪ್ರಕರಣದ ವಿಚಾರದಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಸಂಕಲ್ಪ ತೆಗೆದುಕೊಂಡಾಗ ಮಾತ್ರ ಸರ್ಕಾರ ಜನರ ವಿಶ್ವಾಸ ಗಳಿಸಲು ಸಾಧ್ಯ’ ಎಂದರು.

‘ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಭಯೋತ್ಪಾದಕರಿಗೆ ಶಿಕ್ಷೆ ಅನಿವಾರ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ಸೇನೆ ತಗೆದುಕೊಳ್ಳುವ ನಿರ್ಣಯಕ್ಕೆ ಪರಿಪೂರ್ಣವಾಗಿ ನಾವೆಲ್ಲರೂ ನೈತಿಕವಾಗಿ ಹಾಗೂ ಬಾಹ್ಯವಾಗಿ ಬೆಂಬಲ ನೀಡಬೇಕು. ಅದೂ ಬಿಟ್ಟು ನಿರ್ಧಾರಕ್ಕೆ ವಿರುದ್ದವಾಗಿ ಮಾತನಾಡಿ ಯೋಧರ ಸ್ಥೈರ್ಯ ಕಳೆಯುವ ಕೆಲಸ ಯಾರೂ ಮಾಡಬಾರದು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.