ADVERTISEMENT

ಕರಡಿ ದಾಳಿ: ಮೂವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 10 ಮೇ 2021, 5:43 IST
Last Updated 10 ಮೇ 2021, 5:43 IST
ಕನಕಗಿರಿಯ ಕಾಂಗ್ರೆಸ್ ಯುವ ಮುಂದಾಳು ಸಂಗಪ್ಪ ಸಜ್ಜನ್ ಅವರು ರಂಜಾನ್ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಭಾನುವಾರ ಆಹಾರ ಧಾನ್ಯದ ಕಿಟ್ ವಿತರಿಸಿದರು
ಕನಕಗಿರಿಯ ಕಾಂಗ್ರೆಸ್ ಯುವ ಮುಂದಾಳು ಸಂಗಪ್ಪ ಸಜ್ಜನ್ ಅವರು ರಂಜಾನ್ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಭಾನುವಾರ ಆಹಾರ ಧಾನ್ಯದ ಕಿಟ್ ವಿತರಿಸಿದರು   

ಗಂಗಾವತಿ: ನಗರದ ಕೊಟ್ಟೂರೇಶ್ವರ ಕ್ಯಾಂಪ್‌ನಲ್ಲಿ ಕರಡಿಯೊಂದು ಜನರ ಮೇಲೆ ದಾಳಿ ಮಾಡಿದ್ದು, ಮೂವರು ಗಾಯಗೊಂಡಿದ್ದಾರೆ.

ಕೊಟ್ಟೂರೇಶ್ವರ ಕ್ಯಾಂಪ್‌ನ ಬಳಿಗಾರ ಓಣಿಯ ಈಶ್ವರಮ್ಮ, ನಂದಾಬಾಯಿ ಹಾಗೂ ನಗರಸಭೆ ಪೌರಕಾರ್ಮಿಕ ಕಾಸೀಂಸಾಬ್ ಗಾಯಗೊಂಡವರು.

ಅವರನ್ನು ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ಸ್ಥಳಕ್ಕೆ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಮಾತನಾಡಿ,‘ಇದೇ ಮೊದಲ ಬಾರಿಗೆ ಕರಡಿ ಜನ ವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವವರ ಮೇಲೆ ದಾಳಿ ಮಾಡಿದೆ. ಗುಡ್ಡಗಾಡು ಪ್ರದೇಶದಿಂದ ಅದು ನಗರಕ್ಕೆ ಬಂದಿರಬಹುದು ಎನ್ನುವ ಮಾಹಿತಿ ಇದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯಾಗಿ ನಗರದಲ್ಲಿ ವನ್ಯ ಜೀವಿಗಳು ಕಾಣಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಕರಡಿ ಕಾಣಿಸಿಕೊಂಡಿರುವ ಕುರಿತು ಅಧಿಕಾರಿಗಳು ಎಚ್ಚೆತ್ತುಕೊಂಡು ಬೋನ್ ಅಳವಡಿಕೆ ಮಾಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.