ಯಲಬುರ್ಗಾ: ‘ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್‍ಪಾಸ್ ವಿತರಿಸಲು ಸರ್ಕಾರ ಹೊರಡಿಸಿರುವ ಆದೇಶ ಅವೈಜ್ಞಾನಿಕವಾಗಿದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಕೂಡಲೇ ಈ ಆದೇಶ ಹಿಂಪಡೆಯಬೇಕು’ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಸೋಮವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
‘ಆದೇಶದಲ್ಲಿನಲ್ಲಿನ ಷರತ್ತುಗಳನ್ನು ಗಮನಿಸಿದರೆ ಒಬ್ಬ ಪತ್ರಕರ್ತರೂ ಅರ್ಹತೆ ಹೊಂದುವುದಿಲ್ಲ. ರಾಜ್ಯದಲ್ಲಿ ಸಂಚರಿಸಲು ಅನುಕೂಲವಾಗುವ ರೀತಿಯಲ್ಲಿ ಪಾಸ್ ವಿತರಣೆಗೆ ಮುಂದಾಗಬೇಕು. ಅನಗತ್ಯ ಷರತ್ತುಗಳನ್ನು ವಿಧಿಸದೆ ಸಂಪಾದಕರು ವಿತರಿಸುವ ಮತ್ತು ವಿವಿಧ ಸಂಘಟನೆಯಲ್ಲಿ ನೋಂದಣಿಯ ಆಧಾರ ಮೇಲೆ ಪಾಸ್ ವಿತರಣೆಗೆ ಮುಂದಾಗಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸಂಘದ ಪದಾಧಿಕಾರಿಗಳಾದ ಶ್ರೀಕಾಂತಗೌಡ ಮಾಲಿಪಾಟೀಲ, ಶರಣಬಸಪ್ಪ ದಾನಕೈ, ಹುಸೇನಸಾಬ ಮೋತೆಖಾನ್, ಶ್ರೀಕಾಂತ ಅಂಗಡಿ, ಸಿ.ಎ. ಆದಿ, ಈರಣ್ಣ ತೋಟದ, ವಿ.ಎಸ್. ಶಿವಪ್ಪಯ್ಯನಮಠ, ಮೌನೇಶ ವಜ್ರಬಂಡಿ, ನೀಲಪ್ಪ, ಶ್ಯಾಮೀದ್ ಲೋಕೇಶ ಸೇರಿ ಅನೇಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.