
ಪ್ರಜಾವಾಣಿ ವಾರ್ತೆಕಾರಟಗಿ: ಪಟ್ಟಣದ ಯುವಕನೊಬ್ಬ ಕಾಲುವೆ ಪಕ್ಕದ ಸಾಲೋಣಿ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ವರದಿಯಾಗಿದೆ.
20ನೇ ವಾರ್ಡ್‌ನ ನಿವಾಸಿ ಸಲೀಂ ದಾವಲಸಾಬ ಮೇಸ್ತ್ರಿ ಕಳ್ಳಿಮನಿ (26) ಆತ್ಮಹತ್ಯೆ ಮಾಡಿಕೊಂಡವರು.
ತಾಯಿ ನೂರಜಾನ ಬೇಗಂ ದೂರು ನೀಡಿದ್ದು, ಮಗನ ಮೃತದೇಹದ ಮೇಲೆ ಗಾಯಗಳಾಗಿದ್ದು, ಸಾವಿನ ಬಗ್ಗೆ ಸಂಶಯವಿದೆ ಎಂದು ತಿಳಿಸಿದ್ದಾರೆ.
ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.