
ತಾವರಗೇರಾ: ‘ದೇಶದ ಬೆನ್ನೆಲುಬು ರೈತ, ನಾವು ಬೆಳೆಯದಿದ್ದರೆ ತಿನ್ನಲು ಆಹಾರ ಸಿಗೋದಿಲ್ಲ. ಆದರೂ ಸಹ ಸರ್ಕಾರಗಳು ರೈತರಿಗೆ ಸಮರ್ಪಕ ಯೋಜನೆಗಳನ್ನು ನೀಡುತ್ತಿಲ್ಲ. ಬೆಳೆ ಹಾನಿಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರು ಚಾಮರಸ ಮಾಲಿ ಪಾಟೀಲ್ ಹೇಳಿದರು
ಪಟ್ಟಣದ ಬುದ್ಧ ವಿಹಾರ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಶನಿವಾರ ರೈತರಿಗೆ ಏರ್ಪಡಿಸಿದ್ದ 2 ದಿನಗಳ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
‘ರೈತರ ಮಕ್ಕಳು ಕರ್ನಾಟಕ ರೈತ ಸಂಘದಲ್ಲಿ ಕೆಲಸ ಮಾಡಿದರೇ ಅನ್ಯಾಯದ ವಿರುದ್ಧ ಹೋರಾಟ ಮಾಡಲು ಸಾದ್ಯ. ಯುವ ಪೀಳಿಗೆಯು ಕೃಷಿ ಕಾರ್ಯ ಮಾಡಲು ಮುಂದಾಗಬೇಕು. ರೈತರಿಗೆ ಸಂಘಟನೆ ವತಿಯಿಂದ ಪ್ರೋ.ಎಂ.ಡಿ ನಂಜುಡಸ್ವಾಮಿ ಅವರ ನೆನಪು ಮತ್ತು ವೈಚಾರಿಕಾ ಚಳುವಳಿ ಕಟ್ಟಲು ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದರು.
ವಿಭಾಗೀಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ‘ರೈತರ ಸಂಕಷ್ಟಗಳು, ಎದುರಿಸುವ ಸಮಸ್ಯೆಗಳ ಕುರಿತು ವಿಶ್ಲೇಷಣೆ ಮಾಡಿದರು.
ನಂತರ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ ವೀರಸಂಗಯ್ಯ ಸಂಪಾದಕತ್ವದ ‘ಪ್ರೀ ಪೇಡ್ ಮೀಟರ್ ಬಂತು ರೈತರಿಗೆ ಆಪತ್ತು ತಂತು’ ಪುಸ್ತಕ ಬಿಡುಗಡೆ ಮಾಡಲಾಯಿತು.
ಶಿಬಿರದಲ್ಲಿ ರೈತರ ಸಂಕಷ್ಟ, ಹೋರಾಟದ ಹಾದಿಗಳು, ಯುವ ಪೀಳೀಗೆಯ ರೈತರ ಕುರಿತು ಚರ್ಚೆ ನಡೆಸಲಾಯಿತು.
ರೈತ ಸಂಘದ ವಿಭಾಗಿಯ ಕಾರ್ಯದರ್ಶಿ ಎಂ.ಎಲ್.ಕೆ ನಾಯ್ಡು, ರಾಜ್ಯ ರೈತ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಭೀಮಸೇನ್ ಮಾತನಾಡಿದರು.
ಮಹಿಳಾ ಸಂಘಟನೆಯ ಮಹಿಳಾ ರಾಜ್ಯಾಧ್ಯಕ್ಷೆ ನಾಗರತ್ನಮ್ಮ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಲಪುರ ನಾಗೇಂದ್ರ, ರಾಜ್ಯ ಉಪಾಧ್ಯಕ್ಷ ಶಿವಾನಂದ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ ವಸಂತಕುಮಾರ, ಯುವ ಘಟಕದ ರಾಜ್ಯ ಸಂಚಾಲಕ ಸಿದ್ದನಗೌಡ, ರಾಜ್ಯ ಘಟಕದ ಪದಾಧಿಕಾರಿಗಳು ಜಿಲ್ಲಾ, ತಾಲ್ಲೂಕು ಘಟಕದ ಸದಸ್ಯರು, ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.