ಶ್ರೀರಂಗಪಟ್ಟಣ: ಕಾವೇರಿ ನದಿಗೆ ತ್ಯಾಜ್ಯ ಸೇರುತ್ತಿದ್ದು ನೀರು ಮಲಿನವಾಗುತ್ತಿದೆ. ನದಿ ಕಲುಷಿತವಾಗುವುದನ್ನು ತಡೆಯಲು ಆಡಳಿತ ವ್ಯವಸ್ಥೆ ಹಾಗೂ ಸಂಘ, ಸಂಸ್ಥೆಗಳು ಗಂಭೀರ ಪ್ರಯತ್ನ ನಡೆಸಬೇಕು ಎಂದು ಆದಿ ಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತ ಮಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ಇಲ್ಲಿಗೆ ಸಮೀಪದ ಗಂಜಾಂ ಆದಿಶಂಕರ ಮಠದ ಆಶ್ರಯದಲ್ಲಿ ಬುಧವಾರ ನಡೆದ ಧಾರ್ಮಿಕ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ನದಿಗೆ ವಿಷಯುಕ್ತ ರಾಸಾಯನಿಕಗಳು ಸೇರುತ್ತಿವೆ. ಅಪರಿಚಿತ ಶವಗಳು ನದಿಯಲ್ಲಿ ಕಂಡು ಬರುತ್ತಿವೆ. ಕೊಡಗಿನ ಕಾಫಿ ತೋಟಗಳಿಗೆ ಬಳಸುವ ನಿಷೇಧಿತ ಕ್ರಿಮಿನಾಶಕ ನದಿಗೆ ಸೇರುತ್ತಿದೆ. ಪ್ಲಾಸ್ಟಿಕ್ ಸೇರಿದಂತೆ ವಿಷಯುಕ್ತ ವಸ್ತುಗು ನದಿಗೆ ಸೇರುವುದಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದರು.
ಆದಿಶಂಕರ ಮಠದ ಗಣೇಶ ಸ್ವರೂಪಾನಂದಗಿರಿ ಸ್ವಾಮೀಜಿ ಮಾತನಾಡಿ, ಕಾವೇರಿ ನದಿಯ ಶುದ್ಧತೆ ಕಾಪಾಡಲು ಆದಿ ಶಂಕರ ಪರಮಾನಂದ ಸ್ಥಾಪಿಸಲಾಗಿದೆ. ಕಾವೇರಿ ಉಗಮ ಸ್ಥಾನ ತಲಕಾವೇರಿಯಿಂದ ತಮಿಳುನಾಡಿನ ಪೂಂಪುಹಾರ್ ವರೆಗೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.