ADVERTISEMENT

ಮಂಡ್ಯ: 245 ಮಂದಿಗೆ ಕೋವಿಡ್‌–19 ದೃಢ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 16:11 IST
Last Updated 13 ಸೆಪ್ಟೆಂಬರ್ 2020, 16:11 IST
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)   

ಮಂಡ್ಯ: ಭಾನುವಾರ ಒಂದೇ ದಿನ 245 ಮಂದಿಗೆ ಕೋವಿಡ್‌–19 ದೃಢಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8,259ಕ್ಕೆ ಏರಕೆಯಾಗಿದೆ.

ಮಂಡ್ಯ ತಾಲ್ಲೂಕಿನ 81 ಮಂದಿ, ಮಳವಳ್ಳಿ 42, ಕೆ.ಆರ್‌.ಪೇಟೆ 33, ಶ್ರೀರಂಗಪಟ್ಟಣ 31, ನಾಗಮಂಗಲ 16, ಪಾಂಡವಪುರ ತಾಲ್ಲೂಕಿನ 14 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ 1 ಲಕ್ಷ ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ.

ಸಕ್ರಿಯ ರೋಗಿಗಳಲ್ಲಿ 460 ಮಂದಿ ಜಿಲ್ಲೆಯ ವಿವಿಧೆಡೆ ಇರುವ ಕೋವಿಡ್‌ ಕೇರ್‌ ಕೇಂದ್ರದಲ್ಲಿ, 515 ಮಂದಿ ಜಿಲ್ಲಾಸ್ಪತ್ರೆ ಸೇರಿ ವಿವಿಧ ತಾಲ್ಲೂಕು ಆಸ್ಪತ್ರೆಯಲ್ಲಿ, 115 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

ADVERTISEMENT

ಕೋವಿಡ್‌ನಿಂದ ಗುಣಮುಖರಾದ 277 ಮಂದಿಯನ್ನು ಭಾನುವಾರ ವಿವಿಧ ಆಸ್ಪತ್ರೆ, ಕೋವಿಡ್‌ ಕೇರ್‌ ಕೇಂದ್ರಗಳಿಂದ ಬಿಡುಗಡೆ ಮಾಡಲಾಯಿತು. ಮಂಡ್ಯ ತಾಲ್ಲೂಕಿನ 103 ಮಂದಿ, ಕೆ.ಆರ್‌.ಪೇಟೆ 71, ಶ್ರೀರಂಗಪಟ್ಟಣ 20, ಪಾಂಡವಪುರ 13, ನಾಗಮಂಗಲ ತಾಲ್ಲೂಕಿನ ಮೂವರನ್ನು ಆಸ್ಪತ್ರೆಗಳಿಂದ ಮನೆಗೆ ಕಳುಹಿಸಲಾಯಿತು.

ಇಲ್ಲಿಯವರೆಗೂ ಜಿಲ್ಲೆಯಲ್ಲಿ 5,997 ಮಂದಿ ಗುಣಮುಖರಾಗಿದ್ದಾರೆ. 2,175 ಪ್ರಕರಣ ಸಕ್ರಿಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.