
ಕಿಕ್ಕೇರಿ: ಹುಲ್ಲು ಕತ್ತರಿಸುವ ಯಂತ್ರಕ್ಕೆ ಸಿಲುಕಿ ಹೋಬಳಿಯ ಬೋಳಮಾರನಹಳ್ಳಿಯ ದೇವನಾಥ್ ಅವರ ಕೈಬೆರಳು ತುಂಡಾಗಿವೆ.
ದೇವನಾಥ್ ಶನಿವಾರ ರಾತ್ರಿ ಜಾನುವಾರುಗಳಿಗೆ ಜಮೀನಿನಿಂದ ತಂದಿದ್ದ ಜೋಳದ ಕಡ್ಡಿಯನ್ನು ಕತ್ತರಿಸಲು ಯಂತ್ರಕ್ಕೆ ಹಾಕಿದಾಗ ಆಕಸ್ಮಿಕವಾಗಿ ಕೈ ಯಂತ್ರಕ್ಕೆ ಸಿಲುಕಿದೆ. ಕೈ ಹೊರತೆಗೆಯಲಾಗದೆ ಕೂಗಿಕೊಂಡಿದ್ದಾರೆ.
ಕೂಗಾಟಕ್ಕೆ ಮನೆಯವರು, ಅಕ್ಕಪಕ್ಕದವರು ಸ್ಥಳಕ್ಕೆ ಆಗಮಿಸಿ ಯಂತ್ರವನ್ನು ನಿಲುಗಡೆ ಮಾಡಿದ್ದಾರೆ. ಚೀರಾಡುತ್ತಿದ್ದ ರೈತನ ಕೈಯನ್ನು ಯಂತ್ರದಿಂದ ಹೊರತೆಗೆಯಲು ಹರಸಾಹಸ ಪಟ್ಟಿದ್ದಾರೆ. ಬಲು ತ್ರಾಸಪಟ್ಟು ರಕ್ತಸಿಕ್ತವಾದ ಕೈಯನ್ನು ಹೊರಗಡೆ ತೆಗೆದಿದ್ದಾರೆ. ಯಂತ್ರಕ್ಕೆ ಕೈ ಸಿಲುಕಿದ ಪರಿಣಾಮ ಕೈ ಬೆರಳು ಹಾಗೂ ಹಸ್ತ ನಜ್ಜುಗುಜ್ಜಾಗಿದೆ.
ಹೆಚ್ಚಿನ ಚಿಕಿತ್ಸೆಗೆ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.