ADVERTISEMENT

ಕುಡಿತ ಬಿಟ್ಟಿದ್ದಕ್ಕೆ ಮನೆಮನೆಗೆ ಕೋಳಿ ಕೊಟ್ಟು ಸಿಹಿ ಹಂಚಿದ!

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 20:34 IST
Last Updated 25 ನವೆಂಬರ್ 2025, 20:34 IST
ಸಾರ್ವಜನಿಕರಿಗೆ ಕೋಳಿ ಹಂಚಿದ ಕಿರಣ್‌ಕುಮಾರ್‌ 
ಸಾರ್ವಜನಿಕರಿಗೆ ಕೋಳಿ ಹಂಚಿದ ಕಿರಣ್‌ಕುಮಾರ್‌    

ಮಂಡ್ಯ: ತಾಲ್ಲೂಕಿನ ಬಸರಾಳು ಗ್ರಾಮದ ಬಿ.ಆರ್‌. ಕಿರಣ್‌ಕುಮಾರ್‌ ಅವರು ಕುಡಿತ ಬಿಟ್ಟ ಸಂತೋಷ, ಹುಟ್ಟುಹಬ್ಬದ ನಿಮಿತ್ತ ಮಂಗಳವಾರ ಗ್ರಾಮಸ್ಥರಿಗೆ ಮಾಂಸದ ಕೋಳಿ ಹಂಚಿದರು.

300ಕ್ಕೂ ಹೆಚ್ಚು ಮನೆಗಳಿಗೆ ಒಂದು ಬ್ರಾಯ್ಲರ್‌ ಕೋಳಿ, ಸಸ್ಯಾಹಾರಿಗಳ 70 ಮನೆಗಳಿಗೆ ಸಿಹಿ ತಿನಿಸುಗಳನ್ನು ಕೊಟ್ಟರು.

‘ಜೀವನದಲ್ಲಿ ನೊಂದಿದ್ದು, ಮದ್ಯಕ್ಕೆ ದಾಸನಾಗಿದ್ದೆ. ಇದು ತಪ್ಪು ಎಂದು ತಿಳಿಯಿತು. ಕುಡಿತ ಬಿಟ್ಟಿರುವ ಕೋಳಿ, ಸ್ವೀಟ್‌ ಬಾಕ್ಸ್‌ ಕೊಟ್ಟಿದ್ದೇನೆ’ ಎಂದು ಕಿರಣ್‌ಕುಮಾರ್‌ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.