
ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಆಟೊ ದರ ಪರಿಷ್ಕರಣೆ
ಕಳೆದ 7 ವರ್ಷಗಳಿಂದ ಆಟೊರಿಕ್ಷಾ ಬಾಡಿಗೆ ದರ ಪರಿಷ್ಕರಣೆಯಾಗದ ಹಿನ್ನೆಲೆಯಲ್ಲಿ ಹಾಗೂ ಎಲ್.ಪಿ.ಜಿ., ಪೆಟ್ರೋಲ್, ಡೀಸೆಲ್ ದರಗಳಲ್ಲಿ ಮತ್ತು ವಾಹನಗಳ ನಿರ್ವಹಣೆ ಮತ್ತು ಇತರೆ ವೆಚ್ಚಗಳಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿರುವುದನ್ನು ಪರಿಗಣಿಸಿ ಸಾರ್ವಜನಿಕರ ಮತ್ತು ಆಟೊರಿಕ್ಷಾ ಚಾಲಕರ ಮತ್ತು ಮಾಲೀಕರ ಹಿತದೃಷ್ಟಿಯಿಂದ ಮಂಡ್ಯ ಜಿಲ್ಲಾ ವ್ಯಾಪ್ತಿಗೆ ಅನ್ವಯಿಸುವಂತೆ ಆಟೊ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾಧಿಕಾರಿ ಕುಮಾರ ತಿಳಿಸಿದ್ದಾರೆ.
ವಿವರಗಳು;2017ರಲ್ಲಿ ನಿಗದಿಯಾಗಿದ್ದ ದರ; ಪ್ರಾಧಿಕಾರದ ಪರಿಷ್ಕೃತ ದರ
ಕನಿಷ್ಠ ದರ– ಮೊದಲ 1.9 ಕಿ.ಮೀ.ಗೆ;₹25;₹30
ನಂತರದ ಪ್ರತಿ ಕಿ.ಮೀ.ಗೆ;₹13;₹15
ಕಾಯುವ ದರ ಮೊದಲ 5 ನಿಮಿಷ;ಉಚಿತ;ಉಚಿತ
ನಂತರದ ಪ್ರತಿ 15 ನಿಮಿಷ/ ಅದರ ಭಾಗಕ್ಕೆ;₹5;₹5
ಲಗೇಜು ದರ– ಮೊದಲ 20 ಕೆ.ಜಿ.ವರೆಗೆ;ಉಚಿತ;ಉಚಿತ
ನಂತರ 20 ಕೆ.ಜಿ./ಅದರ ಭಾಗಕ್ಕೆ;₹2;₹5
ಪ್ರಯಾಣಿಕರ ಗರಿಷ್ಠ ಲಗೇಜು; 50 ಕೆ.ಜಿ.;50 ಕೆ.ಜಿ.
ರಾತ್ರಿ 10ರಿಂದ ನಸುಕಿನ 5ರವರೆಗೆ; ಸಾಮಾನ್ಯ ದರದ ಒಂದೂವರೆ ಪಟ್ಟು ದರ;ಸಾಮಾನ್ಯ ದರದ ಒಂದೂವರೆ ಪಟ್ಟು ದರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.