ADVERTISEMENT

ಅಶಕ್ತರಿಗೆ ಸಹಾಯ ಮಾಡಿ: ಫಕ್ರಿಯಾ ಆಲಂ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 13:51 IST
Last Updated 7 ಜೂನ್ 2025, 13:51 IST
ಕಿಕ್ಕೇರಿಯಲ್ಲಿ ಮುಸ್ಲಿಮರು ಶನಿವಾರ ಬಕ್ರೀದ್ ಅಂಗವಾಗಿ ಮೆರವಣಿಗೆ ನಡೆಸಿದರು
ಕಿಕ್ಕೇರಿಯಲ್ಲಿ ಮುಸ್ಲಿಮರು ಶನಿವಾರ ಬಕ್ರೀದ್ ಅಂಗವಾಗಿ ಮೆರವಣಿಗೆ ನಡೆಸಿದರು   

ಕಿಕ್ಕೇರಿ: ಪಟ್ಟಣದಲ್ಲಿ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಶನಿವಾರ ಆಚರಣೆ ಮಾಡಿದರು. 

ಜಾಮೀಯಾ ಮಸೀದಿಯಲ್ಲಿ ಒಂದೆಡೆ ಸೇರಿ ಪ್ರಾರ್ಥನೆ ಸಲ್ಲಿಸಿದರು. ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದರು. 

ಕೋಟೆ ಗಣಪತಿ, ಆಂಜನೇಯ ಬೀದಿ, ಅಂಗಡಿ ಬೀದಿ ಹಾಗೂ ಮಂದಗೆರೆ ರಸ್ತೆಯಲ್ಲಿ ಸಾಗಿ ಅಂತಿಮವಾಗಿ ಈದ್ಗಾ ಮೈದಾನದಲ್ಲಿ ಜಮಾಯಿಸಿದರು. ಧರ್ಮಗುರು ಫಕ್ರಿಯಾ ಆಲಂ ಪ್ರವಚನ ನೀಡಿದರು. 

ADVERTISEMENT

ತ್ಯಾಗ, ಬಲಿದಾನ, ಆಹಾರ ದಾನದ ಸಂಕೇತದ ಹಬ್ಬದಲ್ಲಿ ಎಲ್ಲರೂ ಮಾನವೀಯತೆಗೆ ಆದ್ಯತೆ ನೀಡಿ. ಅಶಕ್ತರಿಗೆ ಸಹಾಯ ಮಾಡಿ ಎಂದರು. 

ಮಕ್ಕಳು, ಹಿರಿಯರು ಹೊಸಬಟ್ಟೆ ಧರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಅನೆಗೊಳ, ಮಂದಗೆರೆ ಗ್ರಾಮದಲ್ಲಿಯೂ ಹಬ್ಬ ಆಚರಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.