ADVERTISEMENT

ಬೆಳಕವಾಡಿ: ಕೆಪಿಟಿಸಿಎಲ್ ಕೋ -ಅಪರೇಟಿವ್ ಕ್ರೆಡಿಟ್ ಸೊಸೈಟಿ ನಿರ್ದೇಶಕರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 11:08 IST
Last Updated 24 ಫೆಬ್ರುವರಿ 2025, 11:08 IST
ಬೆಳಕವಾಡಿ ಸಮೀಪದ ಶಿವನಸಮುದ್ರಂ (ಬ್ಲಫ್) ಗ್ರಾಮದ ಕೆಪಿಟಿಸಿಎಲ್ ಮತ್ತು ಎಸ್ಕಾಂಸ್ ಎಂಪ್ಲಾಯಿಸ್ ಕೋ - ಅಪರೇಟಿವ್ ಕ್ರೆಡಿಟ್ ಸೊಸೈಟಿ ನಿರ್ದೇಶಕರರಾಗಿ 19 ಮಂದಿ ಚುನಾಯಿತರಾದರು
ಬೆಳಕವಾಡಿ ಸಮೀಪದ ಶಿವನಸಮುದ್ರಂ (ಬ್ಲಫ್) ಗ್ರಾಮದ ಕೆಪಿಟಿಸಿಎಲ್ ಮತ್ತು ಎಸ್ಕಾಂಸ್ ಎಂಪ್ಲಾಯಿಸ್ ಕೋ - ಅಪರೇಟಿವ್ ಕ್ರೆಡಿಟ್ ಸೊಸೈಟಿ ನಿರ್ದೇಶಕರರಾಗಿ 19 ಮಂದಿ ಚುನಾಯಿತರಾದರು   

ಬೆಳಕವಾಡಿ: ಸಮೀಪದ ಶಿವನಸಮುದ್ರಂ (ಬ್ಲಫ್) ಗ್ರಾಮದ ಕೆಪಿಟಿಸಿಎಲ್ ಮತ್ತು ಎಸ್ಕಾಂಸ್ ಎಂಪ್ಲಾಯಿಸ್ ಕೋ - ಅಪರೇಟಿವ್ ಕ್ರೆಡಿಟ್ ಸೊಸೈಟಿಯ 19 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಿತು.

ಕೆಇಬಿ ಪ್ರೌಢಶಾಲೆಯಲ್ಲಿ ಭಾನುವಾರ ಚುನಾವಣೆ ನಡೆದಿದ್ದು, 39 ಮಂದಿ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ಸಹಕಾರ ಸಂಘಗಳ ನಿರೀಕ್ಷಕ ಹಾಗೂ ಚುನಾವಣಾಧಿಕಾರಿ ಜೆ. ಸಂತೋಷ್ ಆಯ್ಕೆಯನ್ನು ಘೋಷಿಸಿದರು.

ನಿರ್ದೇಶಕರಾಗಿ ಸಾಮಾನ್ಯ ಕ್ಷೇತ್ರದಿಂದ ಎನ್. ಮಹೇಶ್, ಕೆ.ಎಸ್. ಕೃಷ್ಣ, ಎಂ.ಗಣಪತಿ, ಎನ್. ಮಹೇಶ್, ಬಿ.ಎಂ. ಮಧುಸೂದನ್, ಎಂ. ಮಹದೇವಸ್ವಾಮಿ, ಆರ್.ಕುಮಾರ್, ಟಿ.ರವಿ, ಎಸ್. ಸಿದ್ದರಾಜಪ್ಪ, ಎ.ಶಾದಬ್, ಶಿವಣ್ಣ, ಎನ್.ಎಂ. ಮನೋಜ್ ಕುಮಾರ್, ಶರಣಬಸಪ್ಪ ಚಿನ್ನಾಪುರ, ಮಹಿಳಾ ಮೀಸಲು ಕ್ಷೇತ್ರದಿಂದ ಡಿ. ಲತಾ, ಎಂ.ಕೆ.ರತ್ನಮ್ಮ, ಹಿಂದುಳಿದ ವರ್ಗಗಳ ಪ್ರವರ್ಗ 'ಎ' ಮೀಸಲು ಕ್ಷೇತ್ರದಿಂದ ಎಸ್. ಉಮೇಶ್, ಹಿಂದುಳಿದ ವರ್ಗಗಳ ಪ್ರವರ್ಗ 'ಬಿ' ಮೀಸಲು ಕ್ಷೇತ್ರದಿಂದ ಗಂಗಾಧರಯ್ಯ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಪ್ರಕಾಶ್, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಎಸ್. ಸುರೇಶ್ ಬಾಬು ಚುನಾಯಿತರಾದರು.

ADVERTISEMENT

ಪ್ರಭಾರ ಕಾರ್ಯದರ್ಶಿ ಚಿಕ್ಕ ಮಾದೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.