ADVERTISEMENT

ನ.1ರಂದು ಬಸವಪ್ಪ ವಿಗ್ರಹಕ್ಕೆ ವಿವಿಧ ತೀರ್ಥಕ್ಷೇತ್ರಗಳ ತೀರ್ಥಾಭಿಷೇಕ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 15:55 IST
Last Updated 30 ಅಕ್ಟೋಬರ್ 2024, 15:55 IST
 ಬಸವೇಶ್ವರ ವಿಗ್ರಹ
 ಬಸವೇಶ್ವರ ವಿಗ್ರಹ   

ಭಾರತೀನಗರ: ಸಮೀಪದ ಚಿಕ್ಕಅರಸಿನಕೆರೆ ಗ್ರಾಮದ  ಕಾಲಭೈರವೇಶ್ವರ ಬಸವಪ್ಪ ಕ್ಷೇತ್ರದಲ್ಲಿ ನವೆಂಬರ್‌ 1ರಂದು ದೀಪಾವಳಿ ಹಬ್ಬದ ಪ್ರಯುಕ್ತ ಭರತಖಂಡದ ವಿವಿಧ ತೀರ್ಥ ಕ್ಷೇತ್ರಗಳ ಗಂಗಾಜಲ ತೀರ್ಥಾಭಿಷೇಕ ಮತ್ತು ಕನಕಾಭಿಷೇಕ ಆಯೋಜಿಸಲಾಗಿದೆ.

 ‘ಅಯೋಧ್ಯೆ , ವಾರಣಾಸಿಯ ಕಾಶಿಕ್ಷೇತ್ರ, ಕೇದಾರನಾಥ, ಹೃಷಿಕೇಶ , ಭದರಿನಾಥ ,  ತಮಿಳುನಾಡಿನ ಕುಂಭಕೋಣಂ  , ಅರ್ಧನಾರೀಶ್ವರ ಕ್ಷೇತ್ರ, ಅರುಣಾಚಲಂ ಕ್ಷೇತ್ರ, ಧರ್ಮಸ್ಥಳದ ನೇತ್ರಾವತಿ ಹಾಗೂ ಕಾವೇರಿ, ಕಪಿಲಾ, ಸ್ಫಟಿಕಾ ನದಿಗಳ ಜಲದಿಂದ ಅಭಿಷೇಕ ನೆರವೇರಿಸಲಾಗುತ್ತದೆ.  ಕನಕಾಭಿಷೇಕವನ್ನೂ ಹಮ್ಮಿಕೊಳ್ಳಲಾಗಿದೆ. ಅನ್ನಸಂತರ್ಪಣೆ ಏರ್ಪಡಿಸಲಾಗಿದೆ’ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT